CINEMA| ಶಾಕುಂತಲಂ ಡಿಜಿಟಲ್ ಹಕ್ಕು ಭಾರೀ ದರಕ್ಕೆ ಸ್ವಂತ ಮಾಡಿಕೊಂಡ ಪ್ರೈಮ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಟಾಲಿವುಡ್ ಸ್ಟಾರ್ ಬ್ಯೂಟಿ ಸಮಂತಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಎಪಿಕ್ ರೊಮ್ಯಾಂಟಿಕ್ ಎಂಟರ್‌ಟೈನರ್ ಸಿನಿಮಾ ‘ಶಾಕುಂತಲಂ’ ಈಗಾಗಲೇ ಪ್ರೇಕ್ಷಕರು ಹಾಗೂ ಸಿನಿ ವಲಯದಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾವನ್ನು ಗುಣಶೇಖರ್ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಮೂಲಕ ಸಮಂತಾ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ.

ಆದರೆ ಈ ಹಿಂದೆಯೇ ಚಿತ್ರ ಬಿಡುಗಡೆಯಾಗಬೇಕಿತ್ತು ಆದರೆ ಕಾರಣಾಂತರಗಳಿಂದ ಚಿತ್ರವು ಸತತವಾಗಿ ಮುಂದೂಡಲ್ಪಟ್ಟಿದೆ. ಕೊನೆಗೂ ಚಿತ್ರತಂಡ ಈ ಸಿನಿಮಾವನ್ನು ಫೆಬ್ರವರಿ 17ಕ್ಕೆ ಬಿಡುಗಡೆ ಮಾಡಲು ರೆಡಿಯಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್‌ಗಳು, ಹಾಡುಗಳು ಮತ್ತು ಟ್ರೇಲರ್‌ಗಳು ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿವೆ. ಮಾಡಿದ್ದೇನೆ ಏತನ್ಮಧ್ಯೆ, ಈ ಚಿತ್ರದ ಬಗ್ಗೆ ಇಂಡಸ್ಟ್ರಿ ವಲಯದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಶಾಕುಂತಲಂ ಸಿನಿಮಾದ ಡಿಜಿಟಲ್ ರೈಟ್ಸ್ ಬಿಡುಗಡೆಗೂ ಮುನ್ನವೇ ಭಾರೀ ದರಕ್ಕೆ ಮಾರಾಟವಾಗಿದೆಯಂತೆ.

ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಜನಪ್ರಿಯ OTT ದೈತ್ಯ ಅಮೆಜಾನ್ ಪ್ರೈಮ್ ಪಡೆದುಕೊಂಡಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಈ ಸಿನಿಮಾದಲ್ಲಿ ದೇವ್ ಮೋಹನ್ ನಾಯಕನಾಗಿ ನಟಿಸುತ್ತಿದ್ದರೆ, ಗುಣಶೇಖರ್ ಅದ್ಧೂರಿ ಕಾಸ್ಟಿಂಗ್ ನಲ್ಲಿ ಈ ಸಿನಿಮಾ ಮಾಡಿದ್ದಾರೆ. ಈ ಸಿನಿಮಾದ ಮೂಲಕ ಸಮಂತಾ ಕಮ್ ಬ್ಯಾಕ್ ಮಾಡ್ತಾರೆ ಅನ್ನೋ ನಂಬಿಕೆ ಅಭಿಮಾನಿಗಳದ್ದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!