– ಎಸ್.ಆರ್.ಗುರುಬಸಣ್ಣವರ
ಸುರೇಬಾನ ಸಮೀಪದ ಶಬರಿ ದೇವಸ್ಥಾನದ ಬೆಟ್ಟದಿಂದ ಅಂತರ ಗಂಗೆಯಲ್ಲಿ ಹರಿಯುವ ಜಲಧಾರೆ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ರಾಮ ಭಕ್ತೆ ಶಬರಿ ಮಾತೆ ನೆಲಸಿದ ಐತಿಹಾಸಿಕ ಪ್ರಸಿದ್ಧ ಸುಂದರ ರಮಣೀಯ ಬೆಟ್ಟ. ನಿತ್ಯ ಪೂಜೆಗೊಳ್ಳುವ ಮಾತೆಯ ದರ್ಶನಕ್ಕೆ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು, ಶಾಲಾ ಮಕ್ಕಳು ಒಂದು ದಿನದ ಪ್ರವಾಸಕ್ಕೆಂದು ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುತ್ತಿದ್ದಾರೆ.
ಮಳೆಗಾಲದಲ್ಲಂತೂ ಹಸಿರಿನಿಂದ ಕಂಗೊಳಿಸುವ ಸುಂದರವಾದ ಬೆಟ್ಟದ ಮಧ್ಯದಲ್ಲಿ ಜಕಣಾಚಾರಿ ಕೈಚಳಕದಿಂದ ನಿರ್ಮಿತವಾದ ಈ ಶಬರಿ ದೇವಸ್ಥಾನ ರಾಮದುರ್ಗ ತಾಲೂಕಿನಲ್ಲಿಯೇ ಆಕರ್ಷಣಿಯ ಕೇಂದ್ರವಾಗಿದೆ.
ಈ ದೇವಾಲಯಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಶ್ರಾವಣ ಮಾಸದಲ್ಲಿ ಭಕ್ತರು ಶಬರಿ ಮಾತೆಗೆ ಉಡಿ ತುಂಬಲು ಮಂಗಳವಾರ ಮತ್ತು ಶುಕ್ರವಾರ ಮುತ್ತೈದೆಯರು ತಮ್ಮ ಕುಟುಂಬದೊಂದಿಗೆ ತಾವು ಬೇಡಿಕೊಂಡ ಹರಕೆಯನ್ನು ತಿರಿಸಲು ಶ್ರಾವಣ ಮಾಸ ಒಂದು ಒಳ್ಳೆಯ ಸುಸಂಧಿ ಎಂದು ಹರಕೆ ತಿರಿಸಲು ಬರುತ್ತಾರೆ. ಇಲ್ಲಿ ಕಡುಬಿನ ಊಟಕ್ಕೆ ಪುಷ್ಕರಣಿಯಲ್ಲಿನ ನೀರು ಒಳ್ಳೆಯ ರುಚಿಯನ್ನು ತುಂಬುತ್ತದೆ.