ಗ್ರೀಸ್‌ ಸಮೀಪದ ಸಮುದ್ರದಲ್ಲಿ ಮುಳುಗಿದ ದೋಣಿ; 50 ಜನರು ನಾಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್
ಗ್ರೀಕ್‌ ದೇಶ ಸಮೀಪದ ಏಜಿಯನ್ ಸಮುದ್ರದಲ್ಲಿ ವಲಸಿಗರ ದೋಣಿಯೊಂದು ಮುಳುಗಡೆಯಾಗಿದ್ದು ಸುಮಾರು 50 ಜನರು ನಾಪತ್ತೆಯಾಗಿದ್ದಾರೆ. ವಾಯು ಮತ್ತು ಸಮುದ್ರ ರಕ್ಷಣಾ ತಂಡಗಳಿಂದ ಕಾರ್ಯಾಚರಣೆ ನಡೆಯುತ್ತಿದೆ ಎಂದು ಗ್ರೀಕ್ ಕರಾವಳಿ ರಕ್ಷಣಾ ಪಡೆ ತಿಳಿಸಿದೆ.
ದಕ್ಷಿಣ ಟರ್ಕಿಯ ಅಂಟಲ್ಯದಿಂದ ಇಟಲಿಗೆ ಹೊರಟಿದ್ದ ದೋಣಿಯಲ್ಲಿ 80 ಜನರಿದ್ದರು. ಗ್ರೀಕ್‌ ಸಮೀಪ ಕಾರ್ಪಥೋಸ್ ಮತ್ತು ರೋಡ್ಸ್ ದ್ವೀಪಗಳ ಸಮೀಪ ದೋಣಿ ಮುಳುಗಡೆಯಾಗಿದೆ. ಅದರಲ್ಲಿನ 50 ಜನರು ನಾಪತ್ತೆಯಾಗಿದ್ದಾರೆ” ಎಂದು ಕೋಸ್ಟ್‌ಗಾರ್ಡ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅವರ ಹೇಳಿಕೆಯ ಪ್ರಕಾರ ದಕ್ಷಿಣ ಏಜಿಯನ್‌ ಕಡಲಿನಲ್ಲಿ ನಾಲ್ಕು ಹಡಗುಗಳು, ಎರಡು ಕೋಸ್ಟ್‌ಗಾರ್ಡ್ ಗಸ್ತು ದೋಣಿಗಳು ಮತ್ತು ಗ್ರೀಕ್ ವಾಯುಪಡೆಯ ಹೆಲಿಕಾಪ್ಟರ್ ಗಳು ರಕ್ಷಣಾ ಪ್ರಯತ್ನದಲ್ಲಿ ತೊಡಗಿವೆ. ಗಂಟೆಗೆ 50 ಕಿಲೋಮೀಟರ್ (30 mph) ವೇಗದಲ್ಲಿ ಬೀಸುತ್ತಿರುವ ಗಾಳಿಯು ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
“ನೌಕಾಘಾತಕ್ಕೆ ಒಳಗಾದವರಲ್ಲಿ ಹಲವರು ಲೈಫ್ ಜಾಕೆಟ್ಗಳನ್ನು ಧರಿಸಿರಲಿಲ್ಲ. ಹಲವರನ್ನು ರಕ್ಷಿಸಲಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!