ಕರಾವಳಿಯಲ್ಲಿ ಉಗ್ರರ ಕರಿನೆರಳು: ಕದ್ರಿ ದೇವಸ್ಥಾನಕ್ಕೆ ಪೊಲೀಸ್ ಬಂದೋಬಸ್ತ್ ಇನ್ನಷ್ಟು ಬಿಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ನಾಗುರಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟದ ಬೆನ್ನಿಗೇ ಹೊರಬಿದ್ದಿರುವ ಹಲವು ಆಘಾತಕಾರಿ ಅಂಶಗಳ ಹಿನ್ನೆಲೆಯಲ್ಲಿ ಮಂಗಳೂರು ನಗರ ಸೇರಿದಂತೆ ಕರಾವಳಿಯಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.
ಈ ನಡುವೆ ಕದ್ರಿ ಶ್ರ ಮಂಜುನಾಥ ದೇವಸ್ಥಾನಕ್ಕೂ ಪೊಲೀಸ್ ಬಂದೋಬಸ್ತ್ ಇನ್ನಷ್ಟು ಬಿಗಿಗೊಳಿಸಲಾಗಿದ್ದು, ಸಂಶಯಾಸ್ಪದ ಚಟುವಟಿಕೆಗಳ ಮೇಲೆ ಖಾಕಿ ಪಡೆ ಹದ್ದಿನ ಕಣ್ಣಿರಿಸಿದೆ.
ಈ ನಡುವೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಅವರ ಅಧ್ಯಕ್ಷತೆಯಲ್ಲಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಸಭೆ ನಡೆದಿದ್ದು, ಈ ಸಂದರ್ಭ ದೇವಸ್ಥಾನ ಪರಿಸರದಲ್ಲಿ ಸಿಂಗಲ್ ಎಂಟ್ರಿ, ಸ್ಕ್ರೀನಿಂಗ್ ಮಷಿನ್, ಪಾರ್ಕಿಂಗ್ ಭದ್ರತೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!