”ಶಾರುಖ್ ಕಂಡ್ರೆ ತುಂಬಾ ಇಷ್ಟ, ಅವರನ್ನು ಫ್ರೆಂಡ್ ಅನ್ನೋಕೆ ಹೆಮ್ಮೆ ಆಗತ್ತೆ”

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಆಲಿಯಾ ಭಟ್ ಸದ್ಯ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇನ್ನೇನು ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ತೆರೆ ಮೇಲೆ ಬರಲಿದ್ದು, ಆಲಿಯಾ ಪ್ರಮೋಷನ್ಸ್‌ಗಾಗಿ ಓಡಾಡುತ್ತಿದ್ದಾರೆ.

ಬಾಲಿವುಡ್‌ನಲ್ಲಿ ಆಲಿಯಾ ಕಿರಿಯರ ಜೊತೆ ಇರುವಂತೆ ಹಿರಿಯರ ಜೊತೆಯಲ್ಲೂ ಸ್ನೇಹಿತರಂತೆ ಇದ್ದಾರೆ. ಈ ಬಗ್ಗೆ ಆಲಿಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಆಲಿಯಾ ಭಟ್‌ಗೆ ಶಾರುಖ್ ಖಾನ್ ಅಂದರೆ ಸಿಕ್ಕಾಪಟ್ಟೆ ಪ್ರೀತಿ ಹಾಗೂ ಗೌರವ ಇದೆಯಂತೆ. ಈ ಹಿಂದೆ ಅವರಿಬ್ಬರು ಡಿಯರ್ ಝಿಂದಗಿ ಸಿನಿಮಾದಲ್ಲಿ ಕೆಲಸ ಮಾಡಿದ್ದು, ಒಟ್ಟಿಗೇ ಪ್ರಮೋಷನ್ಸ್ ಮಾಡಿದ್ದರು. ಶಾರುಖ್ ಅವರು ನನ್ನ ಸ್ನೇಹಿತರು ಅಂತ ಹೇಳಿಕೊಳ್ಳೋಕೆ ನನಗೆ ಹೆಮ್ಮೆ ಎಂದಿದ್ದಾರೆ.

Shah Rukh Khan praises his 'little one' Alia Bhatt for 'Gangubai Kathiawadi'ಇನ್ನು ಸಂಜಯ್ ದತ್‌ಕೂಡ ನನ್ನನ್ನು ಮಗಳಂತೆ ನೋಡ್ತಾರೆ. ನನ್ನ ತಂದೆ ಹಾಗೂ ಸಂಜಯ್ ಅವರು ಒಳ್ಳೆ ಸ್ನೇಹಿತರು ಹಾಗಾಗಿ ಎಲ್ಲರೂ ನನ್ನನ್ನು ಈಗಲೂ ಪುಟ್ಟ ಹುಡುಗಿಯಂತೆ ನೋಡುತ್ತಾರೆ ಎಂದು ಹೇಳಿದ್ದಾರೆ.

Flashback Friday: When the 'Sadak 2' team Alia Bhatt, Pooja Bhatt and Sanjay  Dutt came together for a special picture | Hindi Movie News - Times of India

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!