ಸಲ್ಮಾನ್ ಖಾನ್‌, ಶಾರುಖ್‌ ಖಾನ್‌ ಅನ್ಯೋನ್ಯತೆ ಈ ವಿಡಿಯೋದಲ್ಲಿ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಇಂದು 57ನೇ ವರ್ಷ. ನಿನ್ನೆ ರಾತ್ರಿ ಸಲ್ಮಾನ್ ಸಹೋದರಿ ತಮ್ಮ ಮನೆಯಲ್ಲಿ ಗ್ರ್ಯಾಂಡ್ ಪಾರ್ಟಿಯನ್ನು ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಬಾಲಿವುಡ್ ನ ಹಲವು ತಾರೆಯರು ಭಾಗವಹಿಸಿ ಸದ್ದು ಮಾಡಿದರು.

ಈ ಪಾರ್ಟಿಯಲ್ಲಿ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಕೂಡ ಭಾಗವಹಿಸಿದ್ದರು. ಸಲ್ಮಾನ್ ಜೊತೆ ಶಾರುಖ್ ರನ್ನು ನೋಡಿದ್ದು ಇಬ್ಬರ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. ಈ ಪಾರ್ಟಿಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಲೈಕ್ ಮತ್ತು ಶೇರ್ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಇಬ್ಬರೂ ನಟರು ಆತ್ಮೀಯತೆಯಿಂದ ಅಪ್ಪಿಕೊಳ್ಳುವ ವಿಡಿಯೋ ಅಂತೂ ಭಾರೀ ಲೈಕ್ಸ್‌ ಪಡೆದಿದೆ. ಇವರಿಬ್ಬರ ಅನ್ಯೋನ್ಯತೆ ಎಷ್ಟಿದೆ ಎಂದು ಈ ವಿಡಿಯೋದಿಂದಲೇ ತಿಳಿಯುತ್ತಿದೆ.

ಈ ಪಾರ್ಟಿಯಲ್ಲಿ ಪೂಜಾ ಹೆಗ್ಡೆ, ಜಾನ್ವಿ ಕಪೂರ್, ಟಬು, ಸೋನಾಕ್ಷಿ ಸಿನ್ಹಾ, ಸುನಿಲ್ ಶೆಟ್ಟಿ, ರಿತೇಶ್, ಜೆನಿಲಿಯಾ, ಕಾರ್ತಿಕ್ ಆರ್ಯನ್ ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!