CINE | ಮೆಟ್‌ಗಾಲಾದಲ್ಲಿ ಶಾರುಖ್‌ ಖಾನ್‌ ಐಕಾನಿಕ್‌ ಪೋಸ್‌: ಫ್ಯಾನ್ಸ್‌ ಫಿದಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನ್ಯೂಯಾರ್ಕ್‌ನಲ್ಲಿ ನಡೆದ ಮೆಟ್‌ಗಾಲಾದ ರೆಡ್‌ಕಾರ್ಪೆಟ್‌ನಲ್ಲಿ ಶಾರುಖ್‌ ಖಾನ್‌ ಸಿಕ್ಕಾಪಟ್ಟೆ ಸ್ಟೈಲಿಶ್‌ ಆಗಿ ಕಾಣಿಸಿದ್ದಾರೆ.

ರೆಡ್‌ಕಾರ್ಪೆಟ್‌ನಲ್ಲಿ ನಿಂತು ಶಾರುಖ್‌ ತಮ್ಮ ಐಕಾನಿಕ್‌ ಪೋಸ್‌ನ್ನು ನೀಡಿದ್ದಾರೆ. ಈ ವೇಳೆ ಎಲ್ಲಾ ಫ್ಯಾನ್ಸ್ ‘ಎಸ್​ಆರ್​ಕೆ, ಎಸ್​ಆರ್​ಕೆʼ ಎಂದು ಕೂಗಿದ್ದಾರೆ. ಈ ವೇಳೆ ಅಭಿಮಾನಿಗಳತ್ತ ಮುಖ ಮಾಡಿದ ಶಾರುಖ್ ಖಾನ್ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ. ಕೆಲವು ಅದೃಷ್ಟವಂತರಿಗೆ ಶೇಕ್ ಹ್ಯಾಂಡ್ ಕೂಡ ಸಿಕ್ಕಿದೆ.

 

View this post on Instagram

 

A post shared by DietSabya® (@dietsabya)

ಶಾರುಖ್ ಖಾನ್ ಅವರ ಉಡುಗೆಯನ್ನು ಸಬ್ಯಸಾಚಿ ಮುಖರ್ಜೀ ಅವರು ರೆಡಿ ಮಾಡಿದ್ದರು. ಇದು ಶಾರುಖ್ ಖಾನ್ ಅವರ ಮೊದಲ ಮೆಟ್ ಗಾಲಾ. ಕತ್ತಿನ ಮೇಲೆ ಚಿತ್ರ-ವಿಚಿತ್ರ ಮಣಿ ಸರಗಳನ್ನು ಶಾರುಖ್ ಖಾನ್ ಅವರು ಧರಿಸಿದ್ದರು. ವಿಶೇಷ ಎಂದರೆ ‘K’ ಹೆಸರಿನ ಲಾಕೆಟ್ ಕೂಡ ಅವರ ಕತ್ತಿನ ಮೇಲೆ ರಾರಾಜಿಸಿದೆ. K ಎಂದರೆ ‘ಕಿಂಗ್ ಖಾನ್’ ಎಂಬ ಅರ್ಥವನ್ನು ನೀಡುತ್ತದೆ. ಅಭಿಮಾನಿಗಳು ಪ್ರೀತಿಯಿಂದ ಶಾರುಖ್ ಖಾನ್ ಅವರನ್ನು ಕಿಂಗ್ ಖಾನ್ ಎಂದೇ ಕರೆಯುತ್ತಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!