ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಯಾವುದೋ ದೊಡ್ಡ ಸಿನಿಮಾ ಮೂಲಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆರ್ಯನ್ ಖಾನ್, ನಿರ್ದೇಶನದ ಹಾದಿ ಹಿಡಿದಿದ್ದಾರೆ. ಆರ್ಯನ್ ಖಾನ್, ವೆಬ್ ಸರಣಿ ಒಂದನ್ನು ನಿರ್ದೇಶನ ಮಾಡಿದ್ದು, ಡಾಕ್ಯುಮೆಂಟರಿ ಮಾದರಿಯ ಈ ವೆಬ್ ಸರಣಿಯ ಬಿಡುಗಡೆ ಘೋಷಣೆ ಮಾಡಲಾಗಿದೆ.
ಅಮೆರಿಕದಲ್ಲಿ ನಡೆದ ಇವೆಂಟ್ನಲ್ಲಿ ತಮ್ಮ ಮುಂದಿನ ವರ್ಷದ ಪ್ರಾಜೆಕ್ಟ್ಗಳನ್ನು ಘೋಷಣೆ ಮಾಡಿರುವ ನೆಟ್ಫ್ಲಿಕ್ಸ್, ಆರ್ಯನ್ ಖಾನ್ ಅವರ ವೆಬ್ ಸರಣಿಯ ಘೋಷಣೆಯನ್ನು ಅಧಿಕೃತವಾಗಿ ಮಾಡಿದೆ. ಬಾಲಿವುಡ್ ಜೀವನದ ಬಗ್ಗೆ ವಿಶಿಷ್ಟವಾದ ವೆಬ್ ಸರಣಿಯನ್ನು ಆರ್ಯನ್ ಖಾನ್ ನಿರ್ದೇಶನ ಮಾಡಿದ್ದಾರೆ. ಈ ವೆಬ್ ಸರಣಿಗೆ ಆರ್ಯನ್ ತಾಯಿ ಗೌರಿ ಖಾನ್ ಬಂಡವಾಳ ಹೂಡಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಈ ವೆಬ್ ಸರಣಿ ನಿರ್ಮಾಣಗೊಂಡಿದೆ. ನೆಟ್ಫ್ಲಿಕ್ಸ್ ಸಹ ಇದರ ಜೊತೆಗೂಡಿದೆ. 2025 ರಲ್ಲಿ ವೆಬ್ ಸರಣಿ ಬಿಡುಗಡೆ ಆಗಲಿದೆ. ಆದರೆ ನಿಖರವಾದ ದಿನಾಂಕವನ್ನು ಘೋಷಣೆ ಮಾಡಲಾಗಿತ್ತು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಶಾರುಖ್ ಖಾನ್, ‘ಈ ಹೊಸ ಸರಣಿಯನ್ನು ನೆಟ್ಫ್ಲಿಕ್ಸ್ ಜೊತೆಗೂಡಿ ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ. ಸಿನಿಮಾ ಜಗತ್ತಿನ ಬಗ್ಗೆ ವಿಶಿಷ್ಟ ನೋಟವನ್ನು ಈ ವೆಬ್ ಸರಣಿ ಒಳಗೊಂಡಿದೆ. ಮನೊರಂಜನಾ ಕ್ಷೇತ್ರ ಹೊರಗಿನವರಿಗೆ ಹೇಗೆ ಕಾಣುತ್ತದೆ ಎಂಬುದನ್ನು ಈ ವೆಬ್ ಸರಣಿ ತೋರಿಸಲಾಗಿದೆ. ಆರ್ಯನ್ ಹಾಗೂ ಅವರೊಟ್ಟಿಗೆ ಅನೇಕ ಕ್ರಿಯಾಶೀಲ ಮನಸ್ಸುಗಳು ಮತ್ತು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನ ತಂಡ ಸೇರಿಕೊಂಡು ಕಟ್ಟಿರುವ ಅದ್ಭುತ ಪ್ರಾಡೆಕ್ಟ್ ಆಗಿದ್ದು, ಎಲ್ಲರ ಹೃದಯ ತಲುಪುವ ಮನೊರಂಜನಾ ಸರಕು ಇದಾಗಿರಲಿದೆ’ ಎಂದಿದ್ದಾರೆ ಶಾರುಖ್ ಖಾನ್.