Sunday, December 4, 2022

Latest Posts

ಪಾಕ್ ವೇಗಿಯ ಹೃದಯ ಕದ್ದ ಶಾಹಿದ್ ಆಫ್ರಿದಿ ಮಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಟೂರ್ನಿಯಲ್ಲಿಅಮೋಘ ಪ್ರದರ್ಶನ ನೀಡುತ್ತಿರುವ ಪಾಕಿಸ್ತಾನ ವೇಗಿ ಶಾಹೀನ್ ಆಫ್ರಿದಿಕೊನೆಗೂ ತಮ್ಮ ಪ್ರೀತಿಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಗಳು ಅನ್ಶಾ ಆಫ್ರಿದಿ ಜೊತೆ ಮದುವೆಯಾಗುತ್ತಿದ್ದಾರೆ. ಈ ಕುರಿತು ಸ್ವತಃ ಶಾಹೀನ್ ಆಫ್ರಿದಿ ಕುತೂಹಲ ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಪಾಕಿಸ್ತಾನದ ಜಿಯೋ ವಾಹಿನಿ ಜೊತೆ ಶಾಹೀನ್ ಆಫ್ರಿದಿ ಮದುವೆ ಕುರಿತು ಮಾತನಾಡಿದ್ದಾರೆ. ಈಗಾಗಲೇ ನಮ್ಮಿಬ್ಬರ ಪ್ರೀತಿ ಆಳವಾಗಿದೆ. ಶೀಘ್ರದಲ್ಲೇ ಅನ್ಶಾ ಜೊತೆಗೆ ಹೊಸ ಬದುಕಿಗೆ ಕಾಲಿಡುತ್ತೇನೆ ಎಂದು ಶಾಹೀನ್ ಆಫ್ರಿದಿ ಹೇಳಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಅನ್ಶಾ ಆಫ್ರಿದಿ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

22 ವಯಸ್ಸಿನ ಶಾಹೀನ್ ಆಫ್ರಿದಿ ಅತೀ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಇಷ್ಟು ಬೇಗ ಮದುವೆ ಫಿಕ್ಸ್ ಮಾಡಿಕೊಂಡು ಮಹಿಳಾ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದೀರಿ ಎಂಬ ಪ್ರಶ್ನೆಗೆ ಶಾಹೀನ್ ಆಫ್ರಿದಿ ಉತ್ತರಿಸಿದ್ದಾರೆ. ಅನ್ಶಾ ನನ್ನ ಹೃದಯ ಕದ್ದಿದ್ದಾರೆ. ನನ್ನ ಮನಸ್ಸು ಕೂಡ ಅನ್ಶಾ ಕಡೆ ವಾಲಿದೆ. ನನಗಷ್ಟು ಸಾಕು ಎಂದಿದ್ದಾರೆ.

ಇತ್ತೀಚೆಗೆ ಶಾಹೀದ್ ಆಫ್ರಿದಿ ಕೂಡ ಮಗಳ ಮದುವೆ ಸುಳಿವು ನೀಡಿದ್ದರು. ಇಷ್ಟೇ ಅಲ್ಲ ಶಾಹೀನ್ ಆಫ್ರಿದಿ ಮದುವೆಯಾಗುತ್ತಿರುವ ಕುರಿತು ಮಾಹಿತಿ ನೀಡಿದ್ದರು.
ಶಾಹೀನ್ ಆಫ್ರಿದಿ ಹಾಗೂ ಅನ್ಶಾ ಆಫ್ರಿದಿ ಮದುವೆ ದಿನಾಂಕ ಬಹಿರಂಗವಾಗಿಲ್ಲ. ಎರಡೂ ಕುಟುಂಬದವರು ಇವರ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಸೂಕ್ತ ದಿನಾಂಕ ನೋಡಿ ಮದುವೆ ಫಿಕ್ಸ್ ಮಾಡುವ ಸಾಧ್ಯತೆ ಇದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!