BOLLYWOOD| ‘ಪಠಾಣ್’ ಸೂಪರ್ ಆ್ಯಕ್ಷನ್ ಟ್ರೈಲರ್ ರಿಲೀಸ್: ಹೇಗಿದೆ ಅಭಿಮಾನಿಗಳ ರಿಯಾಕ್ಷನ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸುಮಾರು ಐದು ವರ್ಷಗಳ ಬಳಿಕ ಶಾರುಖ್ ಖಾನ್‌ ತೆರೆ ಮೇಲೆ ಬರಲಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರ  ಶಾರುಖ್ ಮತ್ತು ದೀಪಿಕಾ ಜೋಡಿಯಾಗಿ ಜಾನ್ ಅಬ್ರಹಾಂ ವಿಲನ್ ಆಗಿ ತಯಾರಾಗುತ್ತಿರುವ ಪಠಾಣ್ ಚಿತ್ರದ ಮೇಲೆ ಈಗಾಗಲೇ ಭಾರೀ ನಿರೀಕ್ಷೆಗಳಿವೆ. ಜನವರಿ 25 ರಂದು ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಲಿದೆ.

ಇಂದು ಪಠಾಣ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೇಲರ್‌ನಲ್ಲಿಯೇ ಸಂಪೂರ್ಣ ಕಥೆಯನ್ನು ಪರೋಕ್ಷವಾಗಿ ಹೇಳಲಾಗಿದೆ. ಖಾಸಗಿ ಭಯೋತ್ಪಾದಕ ಗುಂಪು ಹಣಕ್ಕಾಗಿ ಕೆಲಸ ಮಾಡುತ್ತದೆ. ಈ ಗುಂಪು ಹಣವನ್ನು ತೆಗೆದುಕೊಂಡು ಭಾರತವನ್ನು ನಾಶಮಾಡಲು ಭಾರತದ ಮೇಲೆ ಬೃಹತ್ ದಾಳಿಯನ್ನು ಯೋಜಿಸುತ್ತದೆ. ವಿಲನ್‌ ಆಗಿ ಜಾನ್ ಅಬ್ರಹಾಂ ಬಣ್ಣ ಹಚ್ಚಿದ್ದಾರೆ. ಆ ಭಯೋತ್ಪಾದಕ ಗುಂಪಿನಿಂದ ಪಠಾಣ್ ದೇಶವನ್ನು ರಕ್ಷಿಸಿದ್ದಾನೋ ಇಲ್ಲವೋ ಎಂಬುದು ಚಿತ್ರದ ಕಥಾವಸ್ತು.

ಮಾಮೂಲಿ ಕಥೆಯಾದರೂ ಕಥೆಯನ್ನು ಹೊಸ ರೀತಿಯಲ್ಲಿ ತೋರಿಸಲಿದ್ದಾರಂತೆ. ಈ ಚಿತ್ರದಲ್ಲಿ ಸಾಹಸ ದೃಶ್ಯಗಳು ಪ್ರಮುಖವಾಗಿರಲಿವೆ. ಎಲ್ಲಾ ಫೈಟ್‌ ಸೀನ್‌ಗಳು ಗಾಳಿಯಲ್ಲಿ ತೋರಿಸಲಾಗಿದೆ. ಟ್ರೇಲರ್‌ ನೋಡಿ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ. ಟ್ರೇಲರ್ ನಲ್ಲಿಯೇ ಸಾಕಷ್ಟು ಆ್ಯಕ್ಷನ್ ಸೀಕ್ವೆನ್ಸ್ ಗಳನ್ನು ತೋರಿಸಿದರೆ ಸಿನಿಮಾದುದ್ದಕ್ಕೂ ಇನ್ನೆಷ್ಟು ಆ್ಯಕ್ಷನ್ ಸೀಕ್ವೆನ್ಸ್ ಇರಲಿದೆ ಎಂಬ ಮಾತು ಕೇಳಿಬರುತ್ತಿದೆ. ಶಾರುಖ್ ಈ ಸಿನಿಮಾದಿಂದ ಯಾವ ರೇಂಜ್ ಹಿಟ್ ಕೊಡುತ್ತಾರೋ ನೋಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!