ಸುಡಾನ್ ಅಧ್ಯಕ್ಷರಿಂದ ಪ್ಯಾಂಟ್‌ನಲ್ಲೇ ಮೂತ್ರ ವಿಸರ್ಜನೆ: ವಿಡಿಯೋ ಸೆರೆಹಿಡಿದ ಪತ್ರಕರ್ತರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಸುಡಾನ್ ಅಧ್ಯಕ್ಷ ಸಲ್ವಾ ಕಿರ್ ಸಮಾರಂಭವೊಂದರಲ್ಲಿ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಪ್ಯಾಂಟ್‌ನಲ್ಲಿಯೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದು, ಈ ವಿಡಿಯೋವನ್ನು ಚಿತ್ರೀಕರಿಸಿದ ಹಾಗೂ ಶೇರ್ ಮಾಡಿದ ಆರು ಪತ್ರಕರ್ತರನ್ನು ಸರ್ಕಾರ ಬಂಧಿಸಿದೆ.

ಈ ಬಗ್ಗೆ ಪತ್ರಕರ್ತರ ಸಂಘ ಭಾರೀ ವಿರೋಧ ವ್ಯಕ್ತಪಡಿಸಿದ್ದು, ಎಲ್ಲರನ್ನೂ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ.
79 ವರ್ಷದ ಅಧ್ಯಕ್ಷ ಕಿರ್ ಅವರ ಪ್ಯಾಂಟ್ ರಾಷ್ಟ್ರಗೀತೆ ಹಾಡುವ ವೇಳೆ ಒದ್ದೆಯಾಗಿದ್ದನ್ನು ಪತ್ರಕರ್ತರು ಗಮನಿಸಿ ವಿಡಿಯೋ ಮಾಡಿದ್ದರು. ಈ ಬಗ್ಗೆ ಅಧ್ಯಕ್ಷರಿಗೂ ತಿಳಿದಿತ್ತು, ಸುತ್ತಮುತ್ತ ನಿಂತವರಿಗೂ ಇದು ಗೊತ್ತಾಗಿತ್ತು. ಆದರೆ ಈ ಬಗ್ಗೆ ಯಾರೂ ಬೆಳಕು ಚೆಲ್ಲಿದಂತೆ ನಡೆದುಕೊಂಡಿರಲಿಲ್ಲ. ಈ ವಿಡಿಯೋವನ್ನು ಪತ್ರಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ವಿಡಿಯೋ ಭಾರೀ ವೈರಲ್ ಆಗಿತ್ತು.

ಇದು ಅಧ್ಯಕ್ಷರ ರಾಷ್ಟ್ರೀಯ ಭದ್ರತೆಯ ಸೂಕ್ಷ್ಮ ವಿಷಯವಾಗಿದ್ದು, ಇದನ್ನು ಪ್ರಸಾರ ಮಾಡಿದ್ದು, ಅಪರಾಧ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!