ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾರುಖ್ ಖಾನ್ ಪುತ್ರ ಸುಹಾನಾ ಖಾನ್ ಸಿನಿ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಒಟಿಟಿ ನೆಟ್‌ಫ್ಲಿಕ್ಸ್‌ನಲ್ಲಿ ಸುಹಾನಾ ಅಭಿನಯದ ಮೊದಲ ಚಿತ್ರ ದಿ ಆರ್ಚೀಸ್ ತೆರೆಕಾಣದಲಿದೆ.
ಇದಾದ ನಂತರ ಸುಹಾನಾಗೆ ಸಾಕಷ್ಟು ಆಫರ್‌ಗಳು ಬಂದಿದ್ದು, ಒಂದೇ ಒಂದು ಸ್ಕ್ರಿಪ್ಟ್ ಕೇಳಿ ಸುಹಾನಾ ಒಕೆ ಎಂದಿದ್ದಾರಂತೆ.
ಇದು ಶಾರುಖ್ ನಟನೆಯ ಸಿನಿಮಾ, ಆಕ್ಷನ್ ಥ್ರಿಲ್ಲರ್ ಇದಾಗಿರಲಿದ್ದು, ಸುಹಾನಾ ಈ ಸಿನಿಮಾದಲ್ಲಿ ಶಾರುಖ್ ಮಗಳಾಗಿ ನಟಿಸಲಿದ್ದಾರಂತೆ.
ಜನವರಿಯಿಂದ ಶೂಟಿಂಗ್ ಆರಂಭವಾಗಲಿದ್ದು, ಸುಹಾನಾ ಬ್ಯುಸಿಯಾಗಲಿದ್ದಾರೆ. ತನ್ನ ಮೊದಲ ಬಿಗ್ ಸಿನಿಮಾ ತಂದೆಯ ಜೊತೆಯೇ ಇರಲಿ ಎಂದು ಸುಹಾನ ಈ ಆಫರ್‌ನ್ನು ಒಕೆ ಮಾಡಿದ್ದಾರೆ ಎನ್ನಲಾಗಿದೆ.