ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ಅಮಲಾ ಪೌಲ್ ಗೆ ಅವಮಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕೇರಳದ ಎರ್ನಾಕುಲಂನಲ್ಲಿರುವ ತಿರುವೈರಾನಿಕುಲಂ ಮಹಾದೇವ (Mahadeva Temple) ದೇವಸ್ಥಾನಕ್ಕೆ ಭೇಟಿ ನೀಡಿದ್ದ ಬಹುಭಾಷಾ ನಟಿ ಅಮಲಾ ಪೌಲ್ (Amala Paul) ಗೆ ಅವಮಾನ ಮಾಡಲಾಗಿದೆ.

ದೇವಸ್ಥಾನಕ್ಕೆ ಪ್ರವೇಶ ನೀಡಲು ಅಲ್ಲಿನ ಅಧಿಕಾರಿಗಳು ನಿರಾಕರಿಸಿದ್ದರು. ಒಳಗಡೆ ಬರಬೇಡಿ, ಹೊರಗಡೆಯೇ ದೇವರ ದರುಶನ ಪಡೆದು ಹೋಗಿ ಎಂದಿದ್ದರು ಎಂದು ಆರೋಪಿಸಿದ್ದಾರೆ.

ದೇಶದ ಕೆಲವು ಹಿಂದು (Hindu) ಧರ್ಮದ ದೇವಾಲಯದಲ್ಲಿ ಅನ್ಯ ಧರ್ಮದವರಿಗೆ ಪ್ರವೇಶ ನೀಡುವುದಿಲ್ಲ. ಈ ನಿಯಮಗಳನ್ನ ಅಲ್ಲಿನ ಅರ್ಚಕರು, ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಅದರಂತೆಯೇ ಕೇರಳದ ಎರ್ನಾಕುಲಂನಲ್ಲಿರುವ ತಿರುವೈರಾನಿಕುಲಂ ಮಹಾದೇವ ದೇವಸ್ಥಾನಕ್ಕೆ ಅಮಲಾ ಬರದಂತೆ ತಡೆದಿದ್ದಾರೆ. ಅಮಲಾ ಪೌಲ್ ಕ್ರಿಶ್ಚಿಯನ್ (Christian) ಧರ್ಮದವರು ಆಗಿರುವ ಕಾರಣ ದೇವಸ್ಥಾನದ ಪ್ರವೇಶಕ್ಕೆ ನಿರಾಕರಿಸಲಾಗಿದೆ.

ದೇವಸ್ಥಾನದ ನೋಂದಣಿ ಪುಸ್ತಕದಲ್ಲಿ ತಮ್ಮಗಾದ ಅನುಭವವನ್ನು ಹಂಚಿಕೊಂಡ ನಟಿ, 2023ರಲ್ಲೂ ಧಾರ್ಮಿಕ ತಾರತಮ್ಯ ಇನ್ನೂ ಅಸ್ತಿತ್ವದಲ್ಲಿದೆ ಎನ್ನುವುದು ದುಃಖಕರ ಹಾಗೂ ಮತ್ತು ನಿರಾಶಾದಾಯಕವಾಗಿದೆ. ನನಗೆ ದೇವಾಲಯ ಪ್ರವೇಶಿಸಲು ನಿರಾಕರಿಸಿದರೂ ದೂರದಿಂದಲೇ ದೈವಿಕ ಅನುಭವವಾಯಿತು. ನಾನು ಮನಸ್ಸಿನಲ್ಲೇ ಪ್ರಾರ್ಥಿಸಿದೆ. ಆದಷ್ಟು ಬೇಗ ಈ ಧಾರ್ಮಿಕ ತಾರತಮ್ಯ ಬದಲಾಗಲಿ ಎಂದು ಆಶಿಸುತ್ತೇನೆ. ನಾವೆಲ್ಲರೂ ಒಂದೇ ಎಂದು ಎಲ್ಲರನ್ನು ಸಮಾನವಾಗಿ ಪರಿಗಣಿಸುವ ಸಮಯ ಬರುತ್ತದೆ ಎಂದು ಅಮಲಾ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!