ಸಂಗೀತ ಮಾಂತ್ರಿಕ ಇಳಯರಾಜಗೆ ಅವಮಾನ? ದೇಗುಲದ ಗರ್ಭಗುಡಿಗೆ ಪ್ರವೇಶಿಸದಂತೆ ತಡೆದಿದ್ದು ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ದೇಗುಲವೊಂದರಲ್ಲಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ಅಪಮಾನವಾಗಿದೆ ಎಂದು ಹೇಳಲಾಗಿದ್ದು, ಅವರನ್ನು ದೇಗುಲದ ಗರ್ಭಗುಡಿ ಪ್ರವೇಶಿಸದಂತೆ ಅರ್ಚಕರು ತಡೆದಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ತಮಿಳುನಾಡಿನ ಶ್ರೀವಲ್ಲಿಪುತೂರಿನ ಆಂಡಾಳ್ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಳಯರಾಜ ತೆರಳಿದ್ದರು. ದೇವಸ್ಥಾನದ ಒಳಗೆ ಗರ್ಭಗುಡಿಗೆ ಹೋದ ಇಳಯರಾಜ ಅವರನ್ನು ಅರ್ಚಕರು ತಡೆದಿದ್ದಾರೆ ಎನ್ನಲಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಆಗಿದ್ದೇನು?
ಇಳಯರಾಜ ಸಂಯೋಜಿಸಿದ ದಿವ್ಯ ಪಾಶುರಾಮ್ ನಾಟ್ಯಾಂಜಲಿ ಪ್ರದರ್ಶನವನ್ನು ಈ ದೇವಾಲಯದ ಆದಿ ಪುರ ಶೆಡ್‌ನಲ್ಲಿ ಖಾಸಗಿ ಕಂಪನಿಯೊಂದು ನಡೆಸುತ್ತಿತ್ತು. ಹೀಗಾಗಿ ಇಳಯರಾಜ ತಮಿಳುನಾಡಿನ ಶ್ರೀವಿಲ್ಲಿಪುತೂರಿನ ಆಂಡಾಳ್ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಇಳಯರಾಜಾ ಅವರಿಗೆ ದೇಗುಲದ ಆಡಳಿತ ಮಂಡಳಿ ಸಿಬ್ಬಂದಿ ಆತ್ಮೀಯ ಸ್ವಾಗತ ಕೋರಿದ್ದರು.

ಸಂಗೀತ ಸಂಯೋಜಕ ಇಳಯರಾಜ ಅವರು ನಂದನವನಂ, ಆಂಡಾಳ್ ಕ್ಷೇತ್ರ ಹಾಗೂ ಪೆರಿಯ ಪೆರುಮಾಳ್ ದೇವಸ್ಥಾನಗಳಿಗೆ ತೆರಳಿ ಸ್ವಾಮಿಯ ದರುಶನ ಪಡೆದರು. ಆಂಡಾಳ್ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿರುವ ಅರ್ಥ ಮಂಟಪಕ್ಕೆ ಇಳಯರಾಜ ಆಂಡಾಳ್ ತೆರಳಲು ಯತ್ನಿಸಿದಾಗ ಅಲ್ಲಿದ್ದ ಅರ್ಚಕರು ಒಳ ಪ್ರವೇಶಿಸದಂತೆ ತಡೆದರು. ಆ ಬಳಿಕ ಇಳಯರಾಜ ಗರ್ಭಗುಡಿಯಿಂದ ಹೊರಟು ಹೋದರು ಎನ್ನಲಾಗಿದೆ.

https://x.com/mahajournalist/status/1868496218441294173?ref_src=twsrc%5Etfw%7Ctwcamp%5Etweetembed%7Ctwterm%5E1868496218441294173%7Ctwgr%5E19cc692292a4236ced508a82f0ebaa876b4ea99a%7Ctwcon%5Es1_&ref_url=https%3A%2F%2Fkannada.news18.com%2Fnews%2Fentertainment%2Fcontroversy-after-ilaiyaraaja-faces-sanctum-entry-restrictions-srivilliputhur-temple-clarifies-on-it-pvn-1947046.html

ದೇಗುಲ ಆಡಳಿತ ಮಂಡಳಿ ಸ್ಪಷ್ಟನೆ
ಇನ್ನು ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾದ ಬೆನ್ನಲ್ಲೇ ಈ ಬಗ್ಗೆ ದೇಗುಲ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ಆಂಡಾಳ್ ದೇವಾಲಯದಲ್ಲಿ ಇಳಿಯರಾಜ ಅವರಿಗೆ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ ಎಂದು ಹೇಳಿದೆ.

ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಆಂಡಾಳ್ ದೇವಾಲಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಸಕ್ಕರೆ ಅಮ್ಮಾಳ್, ‘ಆಂಡಾಳ್ ದೇವಾಲಯದ ಅರ್ಥ ಮಂಟಪಕ್ಕೆ ಅರ್ಚಕರು, ಸ್ವಾಮೀಜಿಗಳನ್ನು ಬಿಟ್ಟು ಬೇರೆ ಯಾರಿಗೂ ಪ್ರವೇಶವಿಲ್ಲ. ಈ ಪದ್ಧತಿ ಇಂದಿನದಲ್ಲ.. ಹಿಂದಿನಿಂದಲೂ ನಡೆದುಕೊಂಡ ಬಂದದ್ದಾಗಿದೆ. ದೇವಾಲಯದ ಉತ್ಸವದ ವಿಗ್ರಹಗಳನ್ನು ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿರುವ ಅರ್ಥ ಮಂಟಪದಲ್ಲಿ ಶಾಶ್ವತವಾಗಿ ಇರಿಸಲಾಗಿರುವುದರಿಂದ, ಜೀಯರ್‌(ಅರ್ಚಕರು ಮತ್ತು ಶ್ರೀಗಳು)ಗಳನ್ನು ಹೊರತುಪಡಿಸಿ ಯಾರಿಗೂ ಪ್ರವೇಶವಿಲ್ಲ. ಇದೇ ಕಾರಣಕ್ಕೆ ಇಳಯರಾಜ ಹೊರಗೆ ನಿಂತು ದರುಶನ ಪಡೆದರು ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!