ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚಿಂಗ್ ತಂಡದ ಸದಸ್ಯರಾಗಲು ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವ್ಯಾಟ್ಸನ್ ಸಿದ್ಧರಾಗಿದ್ದಾರೆ.
ಈಗಾಗಲೇ ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ರಿಕಿ ಪಾಂಟಿಂಗ್ ಡಿಲ್ಲಿ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಈಗ ಶೇನ್ ವ್ಯಾಟ್ಸನ್ ಜತೆಗೆ ಟೀಂ ಇಂಡಿಯಾದ ಅಜಿತ್ ಅಗರ್ಕರ್ ಕೂಡ ಡೆಲ್ಲಿ ಕ್ಯಾಪಿಟಲ್ಸ್ ಗೆ ಸಹಾಯಕ ಕೋಚ್ ಆಗುವ ಸಾಧ್ಯತೆ ಇದೆ.
ಕಳೆದ ಐಪಿಎಲ್ ನಲ್ಲಿ ಟೀಂ ಇಂಡಿಯಾದ ಮೊಹಮ್ಮದ್ ಕೈಫ್, ಅಜಯ್ ರಾತ್ರಾ ಡೆಲ್ಲಿ ತಂಡದ ಸಹಾಯಕ ಕೋಚ್ ಗಳಾಗಿ ಕಾರ್ಯ ನಿರ್ವಹಿಸಿದ್ದರು.
2022ರಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳಿಗೆ ತಂಡಗಳ ಆಟಗಾರರು ಆಯ್ಕೆಯಾಗಿದ್ದು, ಶಾರ್ದೂಲ್ ತಾಕೂರ್, ಇಶಾಂತ್ ಶರ್ಮಾ, ಟಾಮ್ ಕುರಾನ್ ಸೇರಿ ಒಟ್ಟು 24 ಆಟಗಾರರು ಆಯ್ಕೆಯಾಗಿದ್ದಾರೆ.