”ಮಹಿಳೆ ದೈಹಿಕ, ಮಾನಸಿಕವಾಗಿ ಬಲಶಾಲಿ, ಇದನ್ನು ಒಪ್ಪಲು ಪುರುಷರಿಗೆ ಕಷ್ಟ ”

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳೆಯರು ಹೆಚ್ಚು ಸ್ಟ್ರಾಂಗ್ ಎನ್ನುವುದನ್ನು ಪುರುಷರು ಅರ್ಥಮಾಡಿಕೊಳ್ಳಬೇಕು ಎಂದು ಲಿಂಗ ತಾರತಮ್ಯದ ಬಗ್ಗೆ ನಟ ಆರ್. ಮಾಧವನ್ ಮಾತನಾಡಿದ್ದಾರೆ. ಎಲ್ಲದಕ್ಕೂ ಪುರುಷರನ್ನೂ ದೂಷಿಸಲು ಸಾಧ್ಯ ಇಲ್ಲ. ಕೆಲವು ನಿಯಮಗಳಲ್ಲಿ ಅವರು ಬೆಳೆದು ಬಂದಿರುತ್ತಾರೆ. ಆದತೆ ಬದಲಾವಣೆಗೆ ಅವರು ಒಗ್ಗಲು ತಯಾರಾಗಬೇಕು. ಮಹಿಳೆ ಹಾಗೂ ಪುರುಷ ಸಮಾನರು ಎನ್ನುವ ಬೇಸಿಕ್ ಮೊದಲು ತಿಳಿಯಬೇಕು ಎಂದಿದ್ದಾರೆ.

ನಾವು ಹೇಗೆ ಬೆಳೆದು ಬಂದಿರುತ್ತೀವಿ ಎನ್ನುವುದರ ಮೇಲೆ ಎಲ್ಲವೂ ನಿರ್ಧರಿತವಾಗಿರುತ್ತದೆ. ಕೆಲವೊಮ್ಮೆ ವ್ಯಕ್ತಿಯ ತಪ್ಪು ಇರುವುದಿಲ್ಲ. ಕುಟುಂಬ ಅವರಿಗೆ ಶಿಕ್ಷಣ ನೀಡಬೇಕು. ಮನೆಯಲ್ಲಿ ಮಹಿಳೆಯರಿಗೆ ನಿರ್ಬಂಧ ಹೇರುವುದು ಮಾಡಿದರೆ, ಅವರು ಅದನ್ನು ಮುಂದುವರಿಸುತ್ತಾರೆ.

ಮಹಿಳೆ ದೈಹಿಕ ಹಾಗೂ ಮಾನಸಿಕವಾಗಿ ಬಲಶಾಲಿ. ಇದನ್ನು ಒಪ್ಪಲು ಪುರುಷರು ಕಷ್ಟಪಡುತ್ತಾರೆ. ಆದರೆ ಇದೇ ಸತ್ಯ. ನಮ್ಮ ಮನೆಯ ಎಲ್ಲ ಹೆಣ್ಣುಮಕ್ಕಳು ಸ್ಟ್ರಾಂಗ್ ಆಗಿದ್ದಾರೆ. ಮಾತೃಪ್ರಧಾನ ಕುಟುಂಬ ನಮ್ಮದು. ಪುರುಷರು ಕೂಡ ಅವರವರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಒಟ್ಟಾರೆ ಎಲ್ಲರೂ ಸಂತೋಷವಾಗಿದ್ದೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!