ಚೀನಾ ಜನರಿಗೆ ತಂತಿ ಬೇಲಿಯ ದಿಗ್ಬಂಧನ: ನುಂಗಲಾರದ ತುತ್ತಾದ ನಿರ್ಬಂಧಗಳು

 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೀನಾದಲ್ಲಿ ಕೊರೊನಾ ರಣಕೇಕೆ ಮುಂದುವರೆದಿದೆ. ಶೂನ್ಯ ಕೋವಿಡ್‌ ನೀತಿ ಅನುಸರಿಸುತ್ತಿದ್ದರೂ ಸಹ ಹತೋಟಿಗೆ ಬರುತ್ತಿಲ್ಲ. ಇದರೊಂದಿಗೆ ಸರ್ಕಾರ ಇನ್ನಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಕರೋನಾ ಪ್ರಕರಣಗಳು ಹೆಚ್ಚಾಗಿರುವ ಶಾಂಘೈ ನಗರದಲ್ಲಿ ಮನೆಗಳ ಸುತ್ತ ಬೇಲಿ ಹಾಕಿದೆ. ನಗರದಲ್ಲಿ ಈಗಾಗಲೇ ಕಠಿಣ ಲಾಕ್‌ಡೌನ್‌ನಿಂದಾಗಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ಅನ್ನ, ನೀರಿಲ್ಲದೆ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಇದೀಗ ಬೇಲಿ ನಿರ್ಬಂಧಗಳು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ.

ಈಗಾಗಲೇ ಹಲವಾರು ಪ್ರದೇಶಗಳನ್ನು ಬ್ಯಾರಿಕೇಡ್‌ಗಳಿಂದ ಮುಚ್ಚಿರುವ ಅಧಿಕಾರಿಗಳು ಈಗ ಕರೋನಾ ಸೋಂಕಿತ ಮನೆಗಳ ಸುತ್ತಲೂ ಬೇಲಿಗಳನ್ನು ಹಾಕುತ್ತಿದ್ದಾರೆ. ಸುಮಾರು ಎರಡು ಮೀಟರ್ ಎತ್ತರದಲ್ಲಿ ಬೇಲಿ ಹಾಕಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಾಣಿಗಳಿಗೆ ಬೇಲಿ ಹಾಕಿದ ಹಾಗೆ ಮನೆಗಳಿಗೆ ಬೇಲಿ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎರಡೂವರೆ ಶತಕೋಟಿ ನಾಗರೀಕರಿರುವ ಶಾಂಘೈ ನಗರ ಸರ್ಕಾರದ ಕ್ರಮಕ್ಕೆ ನಲುಗಿಹೋಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!