Friday, July 1, 2022

Latest Posts

ರಾಷ್ಟ್ರಪತಿ ಚುನಾವಣಾ ರೇಸ್ ನಿಂದ ಹಿಂದೆ ಸರಿದ ಶರದ್ ಪವಾರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷದ ಅಭ್ಯರ್ಥಿಯಾಗಿ ಶರದ್ ಪವಾರ್​ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತಾದರೂ ಆದರೆ ಸ್ವತಃ ಪವಾರ್​ ಅವರೇ ಇದನ್ನು ಆಸಕ್ತಿ ತೋರಿಲ್ಲ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವರೂ ಆಗಿರುವ ಪ್ರಭಾವಿ ನೇತಾರ ಪವಾರ್​ ಅವರನ್ನು ಪ್ರತಿಪಕ್ಷಗಳು ಒಮ್ಮತದಿಂದ ಆಯ್ಕೆ ಮಾಡಲು ನಿರ್ಧರಿಸಿದ್ದವು. ಕಾಂಗ್ರೆಸ್​ ಕೂಡ ಇದಕ್ಕೆ ತನ್ನ ಬೆಂಬಲ ಘೋಷಿಸಿತ್ತು. ಆದರೆ, ಈ ಅವಕಾಶವನ್ನು ಪವಾರ್​ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ದೆಹಲಿಯಲ್ಲಿ ಸಿಪಿಎಂ ನಾಯಕರಾದ ಸೀತಾರಾಂ ಯೆಚೂರಿ, ಡಿ.ರಾಜಾ, ಪ್ರಫುಲ್ ಪಟೇಲ್ ಮತ್ತು ಪಿ.ಸಿ. ಚಾಕೊ ಅವರನ್ನು ಭೇಟಿ ಮಾಡಿದ ಶರದ್​ ಪವಾರ್ ಚುನಾವಣೆಗೆ ತಾವು ಸ್ಪರ್ಧಿಸಲು ಸಿದ್ಧರಿಲ್ಲ. ಇತರರನ್ನು ಪರಿಗಣಿಸುವಂತೆ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಸೀತಾರಾಂ ಯೆಚೂರಿ, ಶರದ್​ ಪವಾರ್​ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಇತರರ ಹೆಸರುಗಳನ್ನು ಪರಿಗಣಿಸಲಾಗುವುದು ಎಂದಿದ್ದಾರೆ.
ಶರದ್​ ಪವಾರ್​ ಅವರು ಸದಾ ಸಾಮಾನ್ಯ ಜನರೊಂದಿಗೆ ಇರುವ ವ್ಯಕ್ತಿ. ಅವರು ತಮ್ಮನ್ನು ರಾಷ್ಟ್ರಪತಿ ಭವನಕ್ಕೆ ಸೀಮಿತಗೊಳಿಸಿಕೊಳ್ಳಲು ಇಷ್ಟ ಪಡುತ್ತಿಲ್ಲ. 2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರತಿಪಕ್ಷಗಳನ್ನು ಒಟ್ಟುಗೂಡಿಸುವ ಕೆಲಸದಲ್ಲಿ ಪವಾರ್ ನಿರತರಾಗಿದ್ದಾರೆ ಎಂದು ವರದಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss