Friday, February 3, 2023

Latest Posts

ಬಹುಕಾಲದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ`ಪಾರು’ ಖ್ಯಾತಿಯ ಶರತ್ ಪದ್ಮನಾಭ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕನ್ನಡ ಕಿರುತೆರೆಯ ಧಾರಾವಾಹಿ `ಪಾರು’ (Paaru) ಮೂಲಕ ಮನೆ ಮಾತಾದ ನಟ ಶರತ್ ಪದ್ಮನಾಭ್ (Sharath Padmanabh) ಅವರು ಬಹುಕಾಲದ ಗೆಳತಿ ದಿವ್ಯಶ್ರೀ (Divyashree) ಜೊತೆ ಹಸೆಮಣೆ ಏರಿದ್ದಾರೆ.

ಜಸ್ಟ್ ಮಾತ್ ಮಾತಲ್ಲಿ, ಪುಟ್ಮಲ್ಲಿ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಮಿಂಚಿದ್ದ ಶರತ್ ಬೆಂಗಳೂರಿನಲ್ಲಿ ಆಪ್ತರು, ಗುರುಹಿರಿಯರ ಸಮ್ಮುಖದಲ್ಲಿ (ಜ.22)ರಂದು ದಿವ್ಯಶ್ರೀ ಜೊತೆ ಮದುವೆಯಾಗಿದ್ದಾರೆ.

ಮದುವೆಗೆ `ಪಾರು’ ಸೀರಿಯಲ್ ತಂಡ ಮತ್ತು ವಾಹಿನಿ ಕೆಲ ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿತ್ತು. ನಟ ಅನಿರುದ್ಧ, ʻಗಟ್ಟಿಮೇಳʼ ಖ್ಯಾತಿಯ ರಕ್ಷ್, ‌ʻಹಿಟ್ಲರ್‌ ಕಲ್ಯಾಣʼ ಸೀರಿಯಲ್‌ ದಿಲೀಪ್‌ ರಾಜ್ ಸೇರಿದಂತೆ ಹಲವರು ಮದುವೆ (Wedding) ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!