ಶಾರ್ದೂಲ್ ಠಾಕೂರ್​ ಮಿಂಚಿನ ಬೌಲಿಂಗ್: ಆಫ್ರಿಕಾ 229 ರನ್​ಗಳಿಗೆ ಆಲೌಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾರ್ದೂಲ್ ಠಾಕೂರ್​ ಮಿಂಚಿನ ಬೌಲಿಂಗ್ ದಾಳಿಗೆ ಕುಗ್ಗಿದ ಆಫ್ರಿಕಾ ಎರಡನೇ ಟೆಸ್ಟ್​​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ 229 ರನ್​ಗಳಿಗೆ ಆಲೌಟ್​ ಆಗಿದ್ದು, ಈ ಮೂಲಕ 27 ರನ್​​ಗಳ ಮುನ್ನಡೆ ಪಡೆದುಕೊಂಡಿದೆ.
ಭಾರತ ನೀಡಿದ 202 ರನ್​​ ಬೆನ್ನೆತ್ತಿದ್ದ ಆಫ್ರಿಕಾ ತಂಡ ಪೀಟರ್ಸನ್​​ ಹಾಗೂ ತೆಂಬಾ ಬವುಮಾ ಅವರ ಅರ್ಧಶತಕದ ನೆರವಿನಿಂದ 229 ರನ್​ಗಳಿಕೆ ಮಾಡಿದ್ದು, 27ರನ್​​ಗಳ ಮುನ್ನಡೆ ಸಾಧಿಸಿದೆ.
ಭಾರತದ ಪರ ಶಾರ್ದೂಲ್ ಠಾಕೂರ್ 7 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 2 ವಿಕೆಟ್ ಹಾಗೂ ಬುಮ್ರಾ 1 ವಿಕೆಟ್ ಕಬಳಿಸಿದರು.
7 ವಿಕೆಟ್​ ಪಡೆದು ದಾಖಲೆ ಬರೆದ ಶಾರ್ದೂಲ್ ಠಾಕೂರ್​
ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಮಧ್ಯಮ ವೇಗದ ಬೌಲರ್​ ಶಾರ್ದೂಲ್ ಠಾಕೂರ್​ 7 ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ ಹರಿಣಗಳ ನಾಡಿನಲ್ಲಿ ಹರ್ಭಜನ್​ ಬಳಿಕ ಒಂದೇ ಇನ್ನಿಂಗ್ಸ್​​​ನಲ್ಲಿ ಇಷ್ಟೊಂದು ವಿಕೆಟ್ ಪಡೆದುಕೊಂಡಿರುವ ಭಾರತದ ಎರಡನೇ ಬೌಲರ್​ ಆಗಿದ್ದಾರೆ. ಈ ಹಿಂದೆ 2010/11ರಲ್ಲಿ ಹರ್ಭಜನ್ ಸಿಂಗ್ ಕೇಪ್​ಟೌನ್​​ನಲ್ಲಿ 7 ವಿಕೆಟ್ ಪಡೆದುಕೊಂಡಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!