ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಗ ಕಿರೀಟಿ ರೆಡ್ಡಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಒಡೆತನದ ಪಿಆರ್‌ಕೆ ಬ್ಯಾನರ್‌ನಲ್ಲಿ, ಮಾಯಾಬಜಾರ್ ಸಿನಿಮಾ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಅವರು, ಕಿರೀಟಿ ರೆಡ್ಡಿಯನ್ನ ಲಾಂಚ್ ಮಾಡುವ ಹೊಣೆ ಹೊತ್ತಿದ್ದಾರೆ.ಈ ಮೂಲಕ ಜನಾರ್ದನ ರೆಡ್ಡಿ ಮಗನ ಸಿನಿಮಾ ಎಂಟ್ರಿ ನೀಡಲು ವೇದಿಕೆ ಸಜ್ಜಾಗಿದೆ.
‘ಈಗ’ ಸಿನಿಮಾ ನಿರ್ಮಾಣ ಮಾಡಿದ್ದ ಸಾಯಿ ಕೋರ್ರಾಪಾಟಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.
ಇನ್ನುಸಿನಿಮಾ ತೆಲುಗು ಹಾಗೂ ಕನ್ನಡ ಎರಡಲ್ಲೂ ಸಿದ್ಧಗೊಳ್ಳುತ್ತಿದೆ ಎಂದು ತಿಳಿದು ಬಂದಿದೆ. ಈ ಚಿತ್ರಕ್ಕಾಗಿ ಕಿರೀಟಿ ನಟನಾ ತರಬೇತಿ ಕೂಡ ಪಡೆದು ಬಂದಿದ್ದಾರೆ.
ಸದ್ಯ ಕಿರೀಟಿ ರೆಡ್ಡಿ ಪ್ರತಿದಿನ ಜಿಮ್ ನಲ್ಲಿ ವರ್ಕ್ ಔಟ್, ಜೊತೆಗೆ ಡ್ಯಾನ್ಸ್ ಕ್ಲಾಸ್ ಅಂತಾ ನಟನೆಗೆ ಬೇಕಾಗುವ ಸಿದ್ಧತೆಗಳನ್ನ ಮಾಡುತ್ತಿದ್ದಾರೆ.