ಮೋಸ ಮಾಡಿದ್ದಾಳೆ: ಪ್ರೇಯಸಿಯ ಕತ್ತು ಸೀಳಿ ಕೊಂದ ಪಾಗಲ್ ಪ್ರೇಮಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಕತ್ತು ಸೀಳಿ ಕೊಂದಿದ್ದಾನೆ.
ವರ್ಕಲದ ವಡೆಸ್ಸೆರಿಕೋಣಂನಲ್ಲಿ 17  ವರ್ಷದ ಪ್ರೇಯಸಿ ಸಂಗೀತಳಾನ್ನು ಬಾಯ್‌ಫ್ರೆಂಡ್ ಗೋಪು ಚಾಕುವಿನಿಂದ ಕತ್ತು ಸೀಳಿ ಕೊಂದಿದ್ದಾನೆ.

ಪ್ರೇಯಸಿ ಮೋಸ ಮಾಡಿದ್ದಾಳೆ ಎಂದು ಭಾವಿಸಿದ ಗೋಪು ಆಕೆಯ ಮನೆಯ ಬಳಿ ಬಂದು ಅವಳನ್ನು ಹೊರಗೆ ಕರೆದಿದ್ದಾನೆ. ಸಂಗೀತಾ ಹೊರಗೆ ಬರುತ್ತಿದ್ದಂತೆಯೇ ಚಾಕು ತೆಗೆದು ಕುತ್ತಿಗೆ ಸೀಳಿದಿದ್ದಾನೆ.
ಕತ್ತು ಸೀಳಿ ಆತ ಪರಾರಿಯಾಗಿದ್ದಾನೆ, ಕತ್ತಿನ ಬಳಿ ಕೈ ಹಿಡಿದುಕೊಂಡು ಬಂದ ಸಂಗೀತ ಮನೆಯ ಬಾಗಿಲು ಹಾಕಿದ್ದಾಳೆ. ಮನೆಯವರು ಆಕೆ ಕುತ್ತಿಗೆಯಿಂದ ರಕ್ತ ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಾರ್ಗಮಧ್ಯೆಯೇ ಸಂಗೀತ ಕೊನೆಯುಸಿರೆಳೆದಿದ್ದಾಳೆ.

ಗೋಪು ಸಂಗೀತಾ ಬಹಳ ಕಾಲದಿಂದ ಪ್ರೀತಿಸುತ್ತಿದ್ದರು. ಸಂಗೀತಾ ಮೋಸ ಮಾಡುತ್ತಿದ್ದಾಳೆ ಎಂದು ಗೋಪುಗೆ ಅನುಮಾನ ಕಾಡಿತ್ತು. ಆಕೆಯನ್ನು ಪರೀಕ್ಷಿಸಲು ಬೇರೆ ಸಿಮ್ ಬಳಸಿ ಬೇರೆ ಯುವಕನಂತೆ ಮೆಸೇಜ್ ಮಾಡಲು ಆರಂಭಿಸಿದ್ದ, ನಂತರ ಕಾಲ್ ಮಾಡಲು ಶುರು ಮಾಡಿದ್ದ. ಇಬ್ಬರೂ ನಿರಂತರವಾಗಿ ಮಾತನಾಡುತ್ತಿದ್ದರು. ಇದರಿಂದ ಕೋಪಗೊಂಡ ಗೋಪು ಆಕೆ ಮನೆಯ ಬಳಿ ತೆರಳಿ ಅದೇ ಬೇರೆ ನಂಬರ್ ಬಳಸಿ ಕಾಲ್ ಮಾಡಿದ್ದಾನೆ. ಆಕೆ ಹೊರಗೆ ಬಂದಿದ್ದು, ವಾಗ್ವಾದ ನಡೆದಿದೆ. ಕೋಪದಲ್ಲಿ ಕುತ್ತಿಗೆ ಸೀಳಿ ಪರಾರಿಯಾಗಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!