ವಿಶ್ವಕಪ್‌ನಲ್ಲಿ ಭಾರತಕ್ಕೆ ಖಚಿತವಾಗಿ ಈತನೇ ಓಪನರ್… ಟೀಂ ಇಂಡಿಯಾ ಸ್ಟಾರ್‌ ಗೆ ಬ್ರೆಟ್ ಲೀ ಬಹುಪರಾಕ್ 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಾರತದಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್‌ ಗೆ ಇನ್ನೊಂದೇ ವರ್ಷ ಬಾಕಿ ಇದೆ. ಈ ನಿಟ್ಟಿನಲ್ಲಿ ಪ್ರಭಲ ತಂಡಕಟ್ಟುವಲ್ಲಿ ನಿರತವಾಗಿರುವ ಮ್ಯಾನೇಜ್‌ ಮೆಂಟ್ ಹಲವಾರು ಪ್ರಯೋಗಗಳನ್ನು ನಡೆಸಿ ಸಮರ್ಥ ಆಟಗಾರರ ಪಡೆ ಕಟ್ಟುತ್ತಿದೆ. ಅದರಲ್ಲೂ ಓಪನರ್‌ ಸ್ಥಾನಕ್ಕೆ ಪೈಪೋಟಿ ತೀವ್ರವಾಗಿದೆ. ಕೆ,ಎಲ್‌.ರಾಹುಲ್‌, ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ರಿಷಭ್‌ ಪಂತ್ ಹಗೂ ಶುಭ್ಮನ್‌ ಗಿಲ್‌ ಆಯ್ಕೆಗಳಲ್ಲಿ ಅಂತಿಮವಾಗಿ‌ ಓಪನರ್‌ ಆಗಿ ಮ್ಯಾನೇಜ್‌ ಮೆಂಟ್‌ ಯಾರನ್ನು ಆರಿಸುತ್ತದೆ ಎಂಬ ಕುತೂಹಲ ಹೆಚ್ಚಿದೆ.
ಈ ನಡುವೆ ಈ ವಿಚಾರವಾಗಿ ಮಾತನಾಡಿರುವ ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರ ಬ್ರೆಟ್ ಲೀ, ಯುವ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಮತ್ತು ಮುಂದಿನ ವರ್ಷ ವಿಶ್ವಕಪ್‌ನಲ್ಲಿ ‘ಖಚಿತವಾಗಿಯೂ ಆತನೇ ಓಪನರ್’ ಆಗಲಿದ್ದಾನೆ ಎಂದು ಹೇಳಿದ್ದಾರೆ.
ಇಶಾನ್ ಬಾಂಗ್ಲಾದೇಶದ ವಿರುದ್ಧದ ಮೂರನೇ ಏಕದಿನದಲ್ಲಿ ಅತ್ಯಂತ ವೇಗದ ದ್ವಿಶತಕವನ್ನು ಗಳಿಸಿದರು. ಬ್ಯಾಟ್‌ನೊಂದಿಗೆ ತಮ್ಮ ನಿಜವಾದ ಸಾಮರ್ಥ್ಯವನ್ನು ತೋರಿಸಿದರು. ಇಶಾನ್ ಹೊಂದಿರುವ ಪ್ರತಿಭೆಯನ್ನು ಪರಿಗಣಿಸಿದರೆ ಆತನೇ ಓಪನರ್.‌ ಆದರೆ, ಎಡಗೈ ದಾಂಡಿಗ ಕಿಶನ್ ಅಲ್ಲಿಯವರೆಗೆ ಫಿಟ್ ಆಗಿರಬೇಕು ಮತ್ತು ಮುಂಬರುವ ಪಂದ್ಯಗಳಲ್ಲಿ ಸ್ಥಿರವಾಗಿರಬೇಕು ಎಂದು ಬ್ರೆಟ್‌ ಲೀ ಆಶಿಸಿದ್ದಾರೆ.
“ಈ ಅತ್ಯಮೋಘ ದ್ವಿಶತಕದೊಂದಿಗೆ ಇಶನ್‌ ಕಿಶನ್ 2023 ರಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕೆ ಇನ್ನಿಂಗ್ಸ್‌ ಆರಂಭಿಸಲು ಇಶಾನ್ ಬಲವಾದ ಹಕ್ಕನ್ನು ಹೊಂದಿದ್ದಾರೆ. ಇದು ಸಂಭವಿಸುತ್ತದೆಯೇ? ನನಗೆ ಗೊತ್ತಿಲ್ಲ. ಇದು ಸಂಭವಿಸಬೇಕೇ? ಎಂದು ಕೇಳಿದರೆ ನಾನು ಹೌದು ಎನ್ನುತ್ತಾನೆ. ಆ ಆಟಗಾರ ಏಕದಿನ ಇತಿಹಾಸದಲ್ಲಿ ಅತ್ಯಂತ ವೇಗದ 200 ಸಾಧನೆ ಮಾಡಿದ್ದಾನೆ. ಇನ್ನೇನು ಬೇಕು? ನನ್ನ ಪ್ರಕಾರ ವಿಶ್ವಕಪ್‌ನಲ್ಲಿ ಭಾರತಕ್ಕೆ ಆತನೇ ಓಪನರ್” ಎಂದು ಲೀ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಆದಾಗ್ಯೂ, ಒಂದು ಎಚ್ಚರಿಕೆಯ ಮಾತು. ತುಂಬಾ ಹೊಗಳಿಕೆ ಮುಳುಗಡೆಗೆ ಕಾರಣವಾಗುತತದೆ. ಆದ್ದರಿಂದ ಇಶಾನ್ ಕಿಶನ್ ಅವರಿಗೆ ನನ್ನ ಸಲಹೆ ಏನೆಂದರೆ… ಆ ಮೈಲಿಗಲ್ಲನ್ನು ಮರೆತುಬಿಡಿ, ಡಬಲ್ ಶತಕವನ್ನು ಆದಷ್ಟು ಬೇಗ ಮರೆತುಬಿಡಿ. ಸಾಧಿಸಲು ದೊಡ್ಡ ಮೈಲಿಗಲ್ಲುಗಳಿವೆ, ಏರಲು ಉನ್ನತ ಶಿಖರಗಳಿವೆ. ಮುಂದಿನ ಪ್ರಕ್ರಿಯೆಯ ಮೇಲೆ ಗಮನ ಕೇಂದ್ರೀಕರಿಸಿ, ಫಿಟ್ ಆಗಿರಿ ಮತ್ತು ದೊಡ್ಡ ರನ್‌ಗಳನ್ನು ಸಿಡಿಸುವುದನ್ನು ಮುಂದುವರಿಸಿ” ಎಂದು ಲೀ ಸೇರಿಸಿದರು.
ಬಾಂಗ್ಲಾದೇಶದ ವಿರುದ್ಧ ದ್ವಿಶತಕ ಬಾರಿಸಿದ ಇಶಾನ್ ಅವರ ಬ್ಯಾಟಿಂಗ್ ಮಾತ್ರವಲ್ಲ, ವಿರಾಟ್ ಕೊಹ್ಲಿ ಅವರ ಸಹ ಆಟಗಾರನ ಸಾಧನೆಗೆ ಲೀ ಅವರ ಪ್ರತಿಕ್ರಿಯೆಯೂ ಲೀ ಅವರ ಮೆಚ್ಚುಗೆ ಗಳಿಸಿದೆ. ನಾನು ಇನ್ನಿಂಗ್ಸ್‌ನಲ್ಲಿ ಇಷ್ಟಪಟ್ಟದ್ದು ಕೇವಲ ಇಶಾನ್ ಕಿಶನ್ ಅವರ ಶಾಟ್ ಮೇಕಿಂಗ್ ಅಲ್ಲ. ಇಶಾನ್ 200 ನೇ ರನ್ ಗಳಿಸಿದಾಗ ಕೊಹ್ಲಿಯ ಪ್ರತಿಕ್ರಿಯೆ. ಇಬ್ಬರ ನಡುವೆ ಎಂತಹ ಉತ್ತಮ ಮನೋಭಾವ ಮತ್ತು ಒಡನಾಟವಿದೆ” ಎಂದು ಲೀ ಶ್ಲಾಘಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!