ಬೇಕೆ ಬೇಕು, ನ್ಯಾಯ ಬೇಕು.. ಬ್ಯೂಟಿ ಪಾರ್ಲರ್‌ ಕ್ಲೋಸ್‌ ಆಗ್ಲೇಬೇಕು.. ಹೀಗೊಂದು ಯುವಕರ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಹೆಂಗಳೆಯರ ಫೆವರೇಟ್‌ ಸ್ಥಳವಾಗಿರುವ ಬ್ಯೂಟಿ ಪಾರ್ಲರ್‌ ಅನ್ನೇ ಬಂದ್‌ ಮಾಡಿಸಿ ಎಂದು ಇಲ್ಲೊಂದಷ್ಟು ಯುವಕರು ಬೀದಿಗಿಳಿದು ದೊಡ್ಡ ಪ್ರತಿಭಟನೆಯನ್ನೇ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಅರೇ ಈ ಹುಡುಗ್ರಿಗೆ ಹೆಣ್‌ ಮಕ್ಳು ಹಾಗೂ ಬ್ಯೂಟಿ ಪಾರ್ಲರ್‌ ಮೇಲೆ ಇದ್ಯಾಕೆ ಇಷ್ಟು ದ್ವೇಷನಪ್ಪಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಈ ವಿಚಿತ್ರ ಪ್ರತಿಭಟನೆ ಬಿಹಾರದ ಸಸಾರಾಮ್‌ನಲ್ಲಿ ನಡೆದಿದ್ದು, ಯುವಕರ ಗೊಂಪೊಂದು ಬ್ಯೂಟಿ ಪಾರ್ಲರ್‌ ಅನ್ನು ಬಂದ್‌ ಮಾಡಿಸಿ ಎಂದು ಪ್ರತಿಭಟನೆ ಮಾಡಿದೆ. ಈ ವಿಚಿತ್ರ ಪ್ರೊಟೆಸ್ಟ್‌ ಗಂಭೀರ ಉದ್ದೇಶಕ್ಕಾಗಿ ನಡೆಸಲಾಗಿದೆಯೇ ಅಥವಾ ಕೇವಲ ಮನೋರಂಜನೆಯ ಚೇಷ್ಟೆಗಾಗಿ ಮಾಡಲಾಗಿದೆಯೇ ಹಾಗೂ ಈ ಪ್ರತಿಭಟನೆಯ ಹಿಂದಿನ ನಿಜವಾದ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

ಈ ಕುರಿತ ಪೋಸ್ಟ್‌ ಒಂದನ್ನು Bhojpuri_vlogs_00 ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಒಂದಷ್ಟು ಯುವಕರ ಗುಂಪು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಬಂದ್‌ ಮಾಡಿಸಿ ಬಂದ್‌ ಮಾಡಿಸಿ ಬ್ಯೂಟಿ ಪಾರ್ಲರ್‌ಗಳನ್ನು ಬಂದ್‌ ಮಾಡಿಸಿ ಎಂದು ಘೋಷಣೆಯನ್ನು ಕೂಗುತ್ತಾ ವಿಚಿತ್ರ ಪ್ರತಿಭಟನೆಯನ್ನು ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!