ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಶರಣ್ಯ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಸದ್ಯದಲ್ಲೇ ಮದುವೆಯಾಗ್ತಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ವೈರಲ್ ಆಗಿದ್ದು, ಈ ಬಗ್ಗೆ ಶರಣ್ಯ ಸ್ಪಷ್ಟನೆ ನೀಡಿದ್ದಾರೆ.
ಕಿರುತೆರೆಯಲ್ಲಿ ಫೇಮಸ್ ಆಗಿರುವ ಶರಣ್ಯ ಸೈಮಾ ಅವಾರ್ಡ್ಸ್‌ನಲ್ಲಿ ರಕ್ಷಿತ್ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ಈ ಫೋಟೊ ಎಲ್ಲೆಡೆ ವೈರಲ್ ಆಗಿದ್ದು, ಇನ್ನೇನು ಮದುವೆ ಸುದ್ದಿ ಶೀಘ್ರವೇ ಹೊರಬೀಳಲಿದೆ ಎನ್ನಲಾಗಿತ್ತು.
ಈ ಬಗ್ಗೆ ಶರಣ್ಯಾ ರಿಯಾಕ್ಟ್ ಮಾಡಿದ್ದು, ನಮ್ ಜೋಡಿ ಚೆನ್ನಾಗಿದ್ಯಾ ಅಂತ ಪ್ರಶ್ನೆ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಯಾರ ಫೋಟೊ ಸಿಕ್ರೂ ಮದುವೆನಾ ಅಂತ ಕೇಳ್ತಿರಿ, ಇದಕ್ಕೆ ಏನಂತ ಉತ್ತರ ಕೊಡೋದು ಎಂದು ನಕ್ಕಿದ್ದಾರೆ.