ಉಕ್ರೇನ್’ನಿಂದ ಪೋಲೆಂಡ್ ತಲುಪಿದ ಗೋಣಿಕೊಪ್ಪದ ಶೀತಲ್ ಸಂಪತ್

ಹೊಸದಿಗಂತ ವರದಿ, ಗೋಣಿಕೊಪ್ಪ:

ಯುದ್ಧಗ್ರಸ್ತ ಯುಕ್ರೇನ್ ದೇಶದ ಕಾರ್ವೀಕ್ ಪಟ್ಟಣದಲ್ಲಿ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ಜಿಲ್ಲೆಯ ಯುವತಿ ಸುರಕ್ಷಿತವಾಗಿ ಪಕ್ಕದ ದೇಶದ ಪೋಲೆಂಡ್’ನ್ನು ತಲುಪಿದ್ದಾರೆ.
ಗೋಣಿಕೊಪ್ಪ ನಿವಾಸಿ ಪ್ರಸ್ತುತ ಕತಾರ್’ನಲ್ಲಿರುವ ಬಲ್ಲಡಿಚಂಡ ಸಂಪತ್ ಅವರ ಪುತ್ರಿ ಶೀತಲ್ ಸಂಪತ್ ಕಾರ್ವಿಕ್ ಪಟ್ಟಣದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಪಡೆಯಲು ತೆರಳಿದ್ದರು.
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭಗೊಂಡ ನಂತರ ಮರಳಿ ತವರು ನೆಲಕ್ಕೆ ಬರಲು ಯತ್ನಿಸಿದ್ದರು. ಆದರೆ ಇವರು ಸೇರಬೇಕಾಗಿದ್ದ ನೆಲೆ ಹಲವು ಸಾವಿರ ಕಿ.ಮೀ. ಇದ್ದುದರಿಂದ ಯಶಸ್ವಿಯಾಗಿರಲಿಲ್ಲ.
ಆದರೆ ಈ ಬಾರಿ ಶೀತಲ್ ಸಂಪತ್ ಕಾರ್ವಿಕ್ ಪಟ್ಟಣದಿಂದ ಅಂದಾಜು 1,300 ಕಿ ಮೀ ದೂರದ ಪೋಲೆಂಡ್ ದೇಶವನ್ನು ಬುಧವಾರ ತಲುಪಿದ್ದು, ಸದ್ಯ ಭಾರತೀಯ ದೂತಾವಾಸ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದಾರೆ.
ಪೋಲೆಂಡ್ ದೇಶದಲ್ಲಿರುವ ಭಾರತ ರಾಯಭಾರಿ ಕಚೇರಿಯು ಉಕ್ರೇನ್ ದೇಶದಿಂದ ಆಗಮಿಸುತ್ತಿರುವ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸುತ್ತಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಏರ್ ಲಿಫ್ಟ್ ಆಗುವ ಆಶಾಭಾವನೆಯನ್ನು ಶೀತಲ್ ಸಂಪತ್ ವ್ಯಕ್ತಪಡಿಸಿದ್ದಾರೆ.
ಭಾರತೀಯ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾಧ್ಯ ಸಿಂಧ್ಯಾ ಪೋಲೆಂಡ್’ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಶೀತಲ್ ಅವರು ಭಾರತಕ್ಕೆ ಆಗಮಿಸಿದ‌ ಬಳಿಕ ಕತಾರ್’ಗೆ ತೆರಳಿ ತಂದೆಯನ್ನು ಸೇರಿಕೊಳ್ಳಲಿರುವುದಾಗಿ ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!