5ನೇ ಬಾರಿ ಬಾಂಗ್ಲಾ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಜ್ಜಾದ ಶೇಖ್ ಹಸೀನಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದ ಪ್ರಧಾನಿ ಮತ್ತು ಅವಾಮಿ ಲೀಗ್ ಮುಖ್ಯಸ್ಥೆ ಶೇಖ್ ಹಸೀನಾ ಅವರು ಗೆಲುವಿನ ನಗೆ ಬೀರಿದ್ದಾರೆ.

249,965 ಮತಗಳನ್ನು ಪಡೆದಿರುವ ಶೇಖ್ ಹಸೀನಾ ಅವರು ಐದನೇ ಅವಧಿಗೆ ಮತ್ತೆ ಆಯ್ಕೆಯಾಗಲಿದ್ದಾರೆ. ಈಗಾಗಲೇ ಫಲಿತಾಂಶ ಪ್ರಕಟವಾಗಿದೆ.

ಯಾವುದೇ ಘರ್ಷಣೆ ಅಥವಾ ಹಿಂಸಾಚಾರದಲ್ಲಿ ಭಾಗಿಯಾಗದಂತೆ ಪ್ರಧಾನಿಯವರ ಉಪ ಕಚೇರಿ ಕಾರ್ಯದರ್ಶಿ ಜನರಿಗೆ ಮನವಿ ಮಾಡಿದ್ದಾರೆ. ಗೋಪಾಲ್‌ಗಂಜ್-3ರಲ್ಲಿ ದಾಖಲೆಯ ಸಂಖ್ಯೆಯ ಮತಗಳಿಂದ ಹಸೀನಾ ಅವರು ಗೆಲುವು ಸಾಧಿಸಿದ್ದಾರೆ.

ಹಸೀನಾ ಪ್ರತಿಸ್ಫರ್ಧಿ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಶೇಖ್ ಅಬುಲ್ ಕಲಾಂ 460 ಮತಗಳನ್ನು ಗಳಿಸುವಲ್ಲಿ ಸಫಲರಾಗಿದ್ದಾರೆ.

ಢಾಕಾ ಆಡಳಿತ ವಿಭಾಗದ ಅಡಿಯಲ್ಲಿ ಗೋಪಾಲ್‌ಗಂಜ್ ಜಿಲ್ಲೆಯ ಗೋಪಾಲ್‌ಗಂಜ್-೩ ಸ್ಥಾನಕ್ಕೆ ಹಸೀನಾ ಅವರು ಅಭ್ಯರ್ಥಿಯಾಗಿ ನಿಂತಿದ್ದರು. ಇದು ಅವರ ಜನ್ಮಸ್ಥಳ, 1991 ರಿಂದಲೂ ಹಸೀನಾ ಕೇಂದ್ರದಿಂದ ಚುನಾವಣೆ ಸ್ಪರ್ಧಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!