ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ (Rocking star yash) ಬರ್ಥಡೇ ಸಂಭ್ರಮಕ್ಕೆ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಪ್ರವಹಿಸಿ ಮೂವರು ಯುವಕರು ಮೃತಪಟ್ಟಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕಿನ ಸೂರಣಗಿ ಗ್ರಾಮದ ಮೂವರು ಯಶ್ ಅಭಿಮಾನಿಗಳಾದ ಹರಿಜನ, ಮುರಳಿ ನಡವಿನಮನಿ, ನವೀನ್ ಗಾಜಿ ಮೃತರು. ಮಂಜುನಾಥ್ ಹರಿಜನ, ದೀಪಕ್ ಹರಿಜನ ಹಾಗೂ ಪ್ರಕಾಶ್ ಮ್ಯಾಗೇರಿ ಎನ್ನುವವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ನೀಲಗಿರಿ ತೋಪಿಗೆ ಯಶ್ ಬ್ಯಾನರ್ ಕಟ್ಟು ವೇಳೆ ವಿದ್ಯುತ್ ತಗುಲಿದೆ. ತಮ್ಮಿಷ್ಟದ ನಟನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ತಡರಾತ್ರಿ ಬ್ಯಾನರ್ ಕಟ್ಟಲು ತೆರಳಿ ದುರಂತ ಅಂತ್ಯ ಕಂಡಿದ್ದಾರೆ.
ಇಡೀ ಊರಿನಲ್ಲಿ ಸೂತಕದ ಛಾಯೆ ಆವರಿಸಿದೆ. ಕಣ್ಣೆದುರು ಬೆಳೆದುನಿಂತಿದ್ದ ಮಕ್ಕಳನ್ನು ಕಳೆದುಕೊಂಡು ಪೋಷಕರು ಕಂಗಾಲಾಗಿದ್ದಾರೆ. ಈ ಬಗ್ಗೆ ನಟ ಯಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.