ಹೊಸ ದಿಗಂತ ಡಿಜಿಟಲ್ ಡೆಸ್ಕ್
2022ರ ಮೊದಲ ತ್ರೈಮಾಸಿಕದಲ್ಲಿ ಪೆಟ್ರೊಲಿಯಂ ಕಂಪನಿ ಶೆಲ್ 9.1 ಬಿಲಿಯನ್ ಡಾಲರ್ ಗಳಿಕೆ ತೋರಿಸಿದೆ. ಹಿಂದಿನ ವರ್ಷದ ಇದೇ ಸಮಯಕ್ಕೆ ಹೋಲಿಸಿದರೆ ಇದು ಮೂರುಪಟ್ಟು ಹೆಚ್ಚು ಆದಾಯವಾಗಿದೆ.
ಉಕ್ರೇನ್ ಸಂಘರ್ಷದಿಂದ ಜಾಗತಿಕವಾಗಿ ತೈಲ ಬೆಲೆಗಳಲ್ಲಿ ಏರಿಕೆಯಾಗಿದೆ. ಇದರ ಲಾಭವನ್ನು ಪೆಟ್ರೊಲಿಯಂ ಕಂಪನಿಗಳು ಚೆನ್ನಾಗಿಯೇ ಮಾಡಿಕೊಳ್ಳುತ್ತಿವೆ ಎಂಬುದಕ್ಕೆ ಶೆಲ್ ಕಂಪನಿಯ ವಹಿವಾಟೇ ಸಾಕ್ಷಿ.
ಪೆಟ್ರೊಲಿಯಂ ದೈತ್ಯರಾದ ಬ್ರಿಟನ್ ಮೂಲದ ಶೆಲ್ ಮತ್ತು ಬಿಪಿ ಕಂಪನಿಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಬೇಕು ಎಂದು ಅಲ್ಲಿನ ಪ್ರತಿಪಕ್ಷಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ. ಇದೇ ವೇಳೆ, ತಾನು ಲಾಭ ಮಾಡಿಕೊಳ್ಳುತ್ತಿರುವಂತೆ ಹೊರಜಗತ್ತಿಗೆ ಕಂಡರೂ, ರಷ್ಯದಿಂದ ಕಾಲ್ತೆಗೆಯಬೇಕಾಗಿ ಬಂದಿದ್ದರ ವೆಚ್ಚವೇ ತನಗೆ 4 ಬಿಲಿಯನ್ ಡಾಲರುಗಳಷ್ಟಾಗಿದೆ ಎಂದು ಶೆಲ್ ಕಂಪನಿ ಪ್ರತಿಪಾದಿಸುತ್ತಿದೆ.