ಶ್ಶ್… ಸೈಲೆಂಟ್ ಏರ್‌ಪೋರ್ಟ್ ಆಗ್ತಿದೆ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನವರಿ 1ರಿಂದ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೈಲೆಂಟ್ ಏರ್‌ಪೋರ್ಟ್ ಆಗಲಿದೆ!

ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲತೆ ಮಾಡಿಕೊಡುವ ನಿಟ್ಟಿನಲ್ಲಿ ಆಡಳಿತ ಈ ಹೊಸ ಕ್ರಮಕ್ಕೆ ಮುಂದಾಗಿದೆ. ಇನ್ನು ಈ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಗೇಟ್, ಇನ್‌ಲೈನ್ ಬ್ಯಾಗೇಜ್ ಸ್ಕ್ರೀನಿಂಗ್ ಸಿಸ್ಟಮ್‌ನಲ್ಲಿ ಇರುವ ಬದಲಾವಣೆಗೆ ಸಂಬಂಧಿಸಿದ ಪ್ರಕಟಣೆಗಳನ್ನು ಮಾತ್ರ ಧ್ವನಿವರ್ಧಕದ ಮೂಲಕ ಘೋಷಣೆ ಮಾಡಲಾಗುವುದು ಎಂದು ವಿಮಾನ ನಿಲ್ದಾಣದ ಆಡಳಿತ ತಿಳಿಸಿದೆ. ಈ ಮೂಲಕ ಇನ್ನು ಪ್ರಯಾಣಿಕರು ಇಲ್ಲಿ ಶಬ್ಧರಹಿತ ವಾತಾವರಣ ಅನುಭವಿಸಬಹುದಾಗಿದೆ.

ಟರ್ಮಿನಲ್ -1 ಮತ್ತು ಟರ್ಮಿನಲ್ -2ರಲ್ಲಿ ಎಲ್ಲ ವಿಮಾನಗಳ ಮಾಹಿತಿಯನ್ನು ಪ್ರದರ್ಶನ ಪರದೆಗಳಲ್ಲಿ ಪ್ರದರ್ಶಿಸಲಾಗುತ್ತದೆ. ಇದರ ಹೊರತಾಗಿ ತುರ್ತು ಸ್ಥಿತಿ ಹಾಗೂ ಭದ್ರತೆಗೆ ಸಂಬಂಧಿಸಿದ ಪ್ರಕಟಣೆಗಳ ‘ಧ್ವನಿ’ ಮಾತ್ರ ಇಲ್ಲಿ ಕೇಳಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!