ಹೊಸದಿಗಂತ ವರದಿ, ಶಿವಮೊಗ್ಗ :
ರಾಗಿಗುಡ್ಡದಲ್ಲಿ ಅ.1 ರಂದು ನಡೆದ ಗಲಬೆ ಹಿನ್ನೆಲೆಯಲ್ಲಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿಧಿಸಿದ್ದ ನಿಷೇಧಾಜ್ಞೆ (ಕಲಂ 144)ಯನ್ನು ಜಿಲ್ಲಾ ದಂಡಾಧಿಕಾರಿ ಡಾ. ಸೆಲ್ವಮಣಿ ಸಡಿಲಿಸಿ ಆದೇಶಿಸಿದ್ದಾರೆ.
ಗಲಬೆ ಪೀಡಿತ ರಾಗಿಗುಡ್ಡ ಹಾಗೂ ಶಾಂತಿ ನಗರದಲ್ಲಿ ಮಾತ್ರ ನಿಷೇಧಾಜ್ಞೆ ಮುಂದಿನ ಆದೇಶದವರೆಗೂ ಮುಂದುರಿಯಲಿದೆ. ಹೀಗಾಗಿ ಸಭೆ ಸಮಾರಂಭ, ಮೆರವಣಿಗೆ, ಪ್ರತಿಭಟನೆಯನ್ನು ನಡೆಸಲು ನಿರ್ಭಂಧಿಸಲಾಗಿದೆ. ಈ ಪ್ರದೇಶ ಹೊರತುಪಡಿಸಿ ಪಾಲಿಕೆ ವ್ಯಾಪ್ತಿಯ ಉಳಿದೆಲ್ಲಾ ಪ್ರದೇಶಗಳಲ್ಲಿಯೂ ನಿಗದಿತ ಕಾರ್ಯಕ್ರಮ ನಡೆಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.