Thursday, December 1, 2022

Latest Posts

ಶಿವಮೊಗ್ಗ ಪೊಲೀಸರು ಫಿಟ್ ಅಂಡ್ ಫೈನ್: ಎಡಿಜಿಪಿ ಅಲೋಕ್ ಕುಮಾರ್ ಶ್ಲಾಘನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಿವಮೊಗ್ಗ ಪೊಲೀಸರು ದಪ್ಪಗಿಲ್ಲ. ಇಲ್ಲಿನ ಪೊಲೀಸರು ಫಿಟ್ ಅಂಡ್ ಫೈನ್ ಇದ್ದಾರೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಶ್ಲಾಘಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ,ಪೊಲೀಸರು ಆರೋಗ್ಯ ಕಾಪಾಡಿಕೊಳ್ಳಬೇಕು. ದೇಹದ ತೂಕ ಹೆಚ್ಚದಂತೆ ನಿಗಾ ವಹಿಸಬೇಕು. ದಪ್ಪಗಿದ್ದರೆ ಜನರಲ್ಲಿ ವಿಶ್ವಾಸ ಮೂಡುವುದಿಲ್ಲ. ಇವರು ಹೇಗಪ್ಪಾ ಕಳ್ಳರನ್ನು ಹಿಡಿಯುತ್ತಾರೆ, ಇವರಿಗೇ ನಡೆಯಲು ಆಗುವುದಿಲ್ಲ ಎಂದು ಯೋಚಿಸುತ್ತಾರೆ. ಜನರ ವಿಶ್ವಾಸ ಗಳಿಸುವುದು ಮುಖ್ಯ ಎಂದರು.

ಅಬಕಾರಿ ಇಲಾಖೆ ಇಲ್ಲವೇ?
ಜಿಲ್ಲೆಯಲ್ಲಿ ಅಕ್ರಮ ಮದ್ಯ ಪ್ರಕರಣ ಹೆಚ್ಚುತ್ತಿರುವ ಪ್ರಶ್ನೆಗೆ ಅಬಕಾರಿ ಇಲಾಖೆ ಇಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಕ್ರಮ ಮದ್ಯ ಗಮನಿಸಲು ಅಬಕಾರಿ ಇಲಾಖೆ ಇದೆ. ನಮ್ಮ ವ್ಯಾಪ್ತಿಯಲ್ಲೂ ನೋಡುತ್ತೇವೆ. ಅವರು ಬೆಂಗಳೂರು, ಪ್ರಧಾನಿ ಬಂದಾಗ, ರಾಜ್ಯೋತ್ಸವಕ್ಕೆ ಹೀಗೆ ಬಂದೋಬಸ್ತ್‌ಗೆ ಹೋಗಬೇಕಿಲ್ಲ. ಕಾನೂನು ಸುವ್ಯವಸ್ಥೆ ನಮ್ಮ ಪ್ರಾಧಾನ್ಯತೆ. ಹಾಗಾಗಿ ಬಾಟಲಿ ಹುಡುಕುತ್ತಾ ಇರಲು ಆಗುವುದಿಲ್ಲ. ನಾವು ಕತ್ತಿ ಹಿಂದೆ ಹುಡುಕಾಟ ನಡೆಸಬೇಕಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!