ಬರೋಬ್ಬರಿ 100 ಮೊಬೈಲ್ ಮರಳಿ ಕೊಟ್ಟ ಶಿವಮೊಗ್ಗ ಪೊಲೀಸರು!

ಹೊಸದಿಗಂತ ವರದಿ, ಶಿವಮೊಗ್ಗ:

ಸಾರ್ವಜನಿಕರು ಕಳೆದುಕೊಂಡಿದ್ದ ಬರೋಬ್ಬರಿ 100 ಮೊಬೈಲ್ ಗಳನ್ನು ಜಿಲ್ಲಾ ಪೊಲೀಸರು ಶುಕ್ರವಾರ ಹಸ್ತಾಂತರಿಸಿದರು. ಮೊಬೈಲ್ ಪಡೆದವರಲ್ಲಿ ಮರಳಿ ತಮ್ಮ ವಸ್ತು ಪಡೆದ ಸಂತಸ ಮನೆ ಮಾಡಿತ್ತು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಕಳವಾದ ಮೊಬೈಲ್ ಗಳ ಪತ್ತೆಗಾಗಿ ಸಿಇಐಆರ್ ಪೋರ್ಟಲ್ ಅಭಿವೃದ್ಧಿ ಪಡಿಸಿದೆ. ಮೊಬೈಲ್ ಕಳುವಾದವರು ಈ ಪೋರ್ಟಲ್ ಗೆ ಹೋಗಿ ಅಲ್ಲಿ ಕೇಳುವ ಮೊಬೈಲ್ ಇಎಂಇ ಸಂಖ್ಯೆ, ತಮ್ಮ ವಿವರಗಳನ್ನು ದಾಖಲಿಸಿದರೆ ಸಾಕು. ಪೊಲೀಸ್ ಠಾಣೆಗೆ ಬಂದು ಎಫ್ಐಆರ್ ದಾಖಲಿಸುವ, ಪದೇ ಪದೇ ಅಲೆದಾಡುವ ಅಗತ್ಯವೂ ಇಲ್ಲ. ಕಳುವಾದ ಮೊಬೈಲ್ ಆನ್ ಆದ ತಕ್ಷಣ ಆ ವ್ಯಾಪ್ತಿಯ ಪೊಲೀಸರಿಗೆ ಮಾಹಿತಿ ರವಾನೆ ಆಗುತ್ತದೆ. ಸಾರ್ವಜನಿಕರು ಮೊಬೈಲ್ ಕಳುವಾದರೆ ಈ ಪೋರ್ಟಲ್ ಬಳಕೆ ಮಾಡಿ ಎಂದು ಮನವಿ ಮಾಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕಅನಿಲ್ ಕುಮಾರ್ ಭೂಮರೆಡ್ಡಿ, ಸಿಇಎನ್ ಠಾಣೆ ಇನ್ಸ್ಪೆಕ್ಟರ್ ಸಂತೋಷ್, ಪೊಲೀಸ್ ಸಿಬ್ಬಂದಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!