Tuesday, May 30, 2023

Latest Posts

ದೇವರಹೊಸಳ್ಳಿಯಲ್ಲಿ ಭೀಕರ ಅಪಘಾತ: ಸ್ಥಳದಲ್ಲಿಯೇ ಐವರ ಸಾವು

ಹೊಸದಿಗಂತ ವರದಿ, ತುಮಕೂರು:

ರಾಷ್ಟ್ರೀಯ ಹೆದ್ದಾರಿ-4 ರ ದೇವರಹೊಸಳ್ಳಿ ಸಮೀಪ ಶುಕ್ರವಾರ ಸಂಜೆ ಇರುವ ಕಾರು ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ದಾವಣಗೆರೆ ಮೂಲದ ಐವರು ಸ್ಥಳದಲ್ಲಿಯೇ ಮೃತರಾಗಿದ್ದು,7ಮಂದಿ ಗಾಯಗೊಂಡಿದ್ದಾರೆ.
ಖಾಸಗಿ ಬಸ್ ಶಿರಾದಿಂದ ಬೆಂಗಳೂರಿಗೆ ಹೋಗುತ್ತಿದ್ದ ರಸ್ತೆಯ ವಿಭಜಕ ದಾಟಿ ಬೆಂಗಳೂರಿನಿಂದ ಬರುತ್ತಿದ್ದ ಇರುವಾಗ ಕಾರಿಗೆ ಡಿಕ್ಕಿ ಹೊಡೆದಿದೆ.
ಮೂವರನ್ನು ಗೋವಿಂದ ನಾಯ್ಕ (58),ತಿಪ್ಪಮ್ಮ(52)ದಿನೇಶ್(12),ಪಿಂಕಿ(15)ಹಾಗೂ ವಾಹನ ಚಾಲಕರಿಗೆ ಮೂಲದ ರಾಜೇಶ್ ಎಂದು ಗುರುತಿಸಲಾಗಿದೆ.ಗಾಯಾಳುಗಳನ್ನು ಶ್ರೀಕಂಠಪ್ಪ,ಮಂಜುನಾಥ, ಪುಟ್ಟಮ್ಮ, ಭಾಗ್ಯಮ್ಮ,ಮಂಜುನಾಥ್,ಕರಿಯಮ್ಮ, ಮಂಜುಳಾ.ಎಂದು ಗುರುತಿಸಲಾಗಿದೆ.ಸ್ಥಳಕ್ಕೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಅಡಿಷನಲ್ ಎಸ್ಪಿ ಮರಿಯಪ್ಪ,ಡಿಎಸ್ ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದರು,ಕ್ಯಾತ್ಸಂದ್ರ ಪೊಲೀಸರು ಕೇಸು ದಾಖಲಿಸಿದ್ದು,ಮೃತದೇಹನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ,ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!