ಶಿಮುಲ್ ಮುಡಿಗೆ ಫುಡ್ ಸೇಫ್ಟಿ ಸರ್ಟಿಫಿಕೇಟ್ ಗರಿ

ಹೊಸದಿಗಂತ ವರದಿ,ಶಿವಮೊಗ್ಗ:

ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕ್ಕೆ(ಶಿಮುಲ್) ಉತ್ಕೃಷ್ಟ ಗುಣಮಟ್ಟ ಹಾಗೂ ಆಹಾರ ಸುರಕ್ಷತೆ ಪ್ರತೀಕವಾದ ಎಫ್‍ಎಸ್‍ಎಸ್‍ಸಿ(ಫುಡ್ ಸೇಫ್ಟಿ ಸಿಸ್ಟಂ ಸರ್ಟಿಫಿಕೇಟ್) ದೃಢೀಕರಣ ಪ್ರಮಾಣ ಪತ್ರ ಲಭಿಸಿದೆ.
ಒಕ್ಕೂಟದ ಮಾಚೇನಹಳ್ಳಿ ಕಚೇರಿಯಲ್ಲಿ ದೃಢೀಕರಣ ಪತ್ರವನ್ನು ಅಧ್ಯಕ್ಷ ಶ್ರೀಪಾದರಾವ್‍ ನಿರ್ದೇಶಕರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.

ಐಎಸ್‍ಓ ವಿಶ್ವಮಾನ್ಯತೆ ಪಡೆದ ಸಂಸ್ಥೆಯಾಗಿದ್ದು ಈ ಸಂಸ್ಥೆಯು ಆಹಾರ ಸಂಸ್ಕರಣಾ ಘಟಕಗಳಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳ ಗುಣಮಟ್ಟವನ್ನು, ಗ್ರಾಹಕರ ಹಂತದಲ್ಲಿ ಪರೀಕ್ಷೆ ಮಾಡಿ, ಆಹಾರ ಪದಾರ್ಥಗಳಿಂದ ಗ್ರಾಹಕರಿಗೆ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಗಮನಿಸಲಾಗಿರುತ್ತದೆ. ನಿಯಮಾವಳಿಗಳ ಪ್ರಕಾರ ಆಹಾರ ಉತ್ಪನ್ನ ಘಟಕಗಳು ಉತ್ಪಾದನೆ ಮಾಡಿದ್ದು ಕಂಡುಬಂದರೆ ಮಾತ್ರ ಐಎಸ್‍ಓ ದೃಢೀಕರಣ ಪ್ರಮಾಣ ನೀಡಲಾಗುತ್ತದೆ. ಅಂತಹ ಪ್ರಮಾಣಪತ್ರವನ್ನು ಒಕ್ಕೂಟ ಪಡೆದಿದೆ.
ಎಫ್‍ಎಸ್‍ಎಸ್‍ಸಿ ದೃಢೀಕರಣ ಐಎಸ್‍ಓ ದೃಢೀಕರಣದ ಮುಂದುವರಿದ ಆವೃತ್ತಿಯಾಗಿದ್ದು ಇಲ್ಲಿ ಆಯ್ದ ಪ್ರಮಾಣೀಕರಣ ಸಂಸ್ಥೆಗಳಿಂದ ಅಧಿಕಾರಿಗಳು ಒಕ್ಕೂಟಕ್ಕೆ ಭೇಟಿ ನೀಡಿ, ಗುಣಮಟ್ಟ ಹಾಗೂ ಆಹಾರ ಸುರಕ್ಷತೆಗೆ ಸಂಬಂಧಿಸಿ ಪರಿಶೀಲಿಸಿ ದೃಢೀಕರಣ ಪ್ರಮಾಣ ಪತ್ರ ನೀಡಲಾಗುತ್ತದೆ. ಒಮ್ಮೆ ದೃಢೀಕರಣ ಪಡೆದ ನಂತರ ಸಂಬಂಧಿಸಿದ ಪ್ರಮಾಣೀಕರಿಸಿದ ಸಂಸ್ಥೆಗಳಿಂದ ಅಧಿಕಾರಿಗಳು ಯಾವುದೇ ಸಮಯದಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕೆ ಇಲ್ಲದೇ ಒಕ್ಕೂಟಕ್ಕೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ. ಈ ದೃಢೀಕರಣ ಪಡೆದ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತವೆ.
ಇದರಿಂದ ನಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸಿಕೊಡುವಲ್ಲಿ ಸಹಕಾರಿಯಾಗುತ್ತದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಸ್.ಬಸವರಾಜ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!