750 ಟನ್ ಡೀಸೆಲ್ ಸಾಗಿಸುತ್ತಿದ್ದ ಹಡಗು ಟುನೀಶಿಯಾದ ಕರಾವಳಿಯಲ್ಲಿ ಮುಳುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಈಜಿಪ್ಟ್‌ನಿಂದ ಮಾಲ್ಟಾಕ್ಕೆ 750 ಟನ್ ಡೀಸೆಲ್ ಸಾಗಿಸುತ್ತಿದ್ದ ಹಡಗು ಟುನೀಶಿಯಾದ ಆಗ್ನೇಯ ಕರಾವಳಿಯ ಗಲ್ಫ್ ಆಫ್ ಗೇಬ್ಸ್‌ ಸಮುದ್ರ ಪ್ರದೇಶದಲ್ಲಿ ಮುಳುಗಿದೆ.
ಇದರಿಂದಾಗಿ ಹಡಗಿನಿಂದ ಭಾರೀ ಪ್ರಮಾಣದ ತೈಲ ಸಮುದ್ರಕ್ಕೆ ಸೋರಿಕೆಯಾಗುವ ಅಪಾಯ ಏರ್ಪಟ್ಟಿದೆ.
ಈಕ್ವಟೋರಿಯಲ್ ಗಿನಿಯಾ-ಧ್ವಜವಿರುವ ಹಡಗು ಈಜಿಪ್ಟ್ ಬಂದರಾದ ಡಮಿಯೆಟ್ಟಾದಿಂದ ಮಾಲ್ಟಾಕ್ಕೆ ಸಾಗುತ್ತಿದ್ದ ವೇಳೆ ಗಲ್ಫ್ ಆಫ್ ಗೇಬ್ಸ್‌ನಿಂದ ಸುಮಾರು 7 ಕಿಮೀ ದೂರದಲ್ಲಿ ಮುಳುಗಿದೆ. ಕೆಟ್ಟ ಹವಾಮಾನವು ಘಟನೆಗೆ ಕಾರಣವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಧ್ಯಕ್ಕೆ ತೈಲ ಸೋರಿಕೆಯ ಯಾವುದೇ ಅಪಾಯವಿಒಲ್ಲ ಎಂದು ನೌಕಾಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ತೈಲ ರಕ್ಷಣೆ ಸಾಧ್ಯವಾಗದಿದ್ದಲ್ಲಿ ತೈಲ ಸೋರಿಕೆಯಿಂದ ಪರಿಸರದ ಮೇಲೆ ಭಾರೀ ಹಾನಿಗಳು ಆತಂಕ ಎದುರಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!