ಜಪಾನ್‌ನ ಪೂರ್ವ ಚೀನಾ ಸಮುದ್ರದಲ್ಲಿ ಮುಳುಗಿದ ಹಡಗು: ಎಂಟು ಜನರ ಸಾವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಪಾನ್‌ನ (Japan) ನಾಗಸಾಕಿ ಪ್ರಾಂತ್ಯದ ಪೂರ್ವ ಚೀನಾ (China) ಸಮುದ್ರದಲ್ಲಿ ಹಡಗು ಮುಳುಗಿ ಎಂಟು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಈ ಕುರಿತುಕ್ಯೋಡೋ ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದ್ದು,ಪೂರ್ವ ಚೀನಾ ಸಮುದ್ರದಲ್ಲಿ ಜಪಾನ್‌ನ ಡಾಂಜೋ ದ್ವೀಪಗಳ ಪಶ್ಚಿಮಕ್ಕಿರುವ ಸುಮಾರು 110 ಕಿಲೋಮೀಟರ್‌ ದೂರದ ಭಾಗದಿಂದ ರಾತ್ರಿ 11:15 ರ ಸುಮಾರಿಗೆ ಹಡಗು ದುರಂತದ ಕರೆ ಬಂದಿತ್ತು.

ಚಂಡಮಾರುತದ ಎಚ್ಚರಿಕೆ ನೀಡಿಲಾಗಿತ್ತು. ಆ ಸಂದರ್ಭದಲ್ಲೇ ದುರಂತ ಸಂಭವಿಸಿದೆ. ಹಾಂಗ್ ಕಾಂಗ್‌ನ ನೋಂದಾಯಿತ ಸರಕು ಹಡಗಿನಿಂದ13 ಜನರನ್ನು ರಕ್ಷಿಸಲಾಗಿದೆ.

ಸರಕು ಹಡಗಿನಲ್ಲಿ 14 ಮಂದಿ ಚೀನೀಯರು ಮತ್ತು 8 ಮಂದಿ ಮ್ಯಾನ್ಮಾರ್ ಸಿಬ್ಬಂದಿ ಇದ್ದರು. ಮರದ ತುಂಡುಗಳನ್ನು ಹಾಕಿಕೊಂಡು ಮಲೇಷ್ಯಾದಿಂದ ದಕ್ಷಿಣ ಕೊರಿಯಾದ ಇಂಚಿಯಾನ್‌ಗೆ ಹಡಗು ತೆರಳುತ್ತಿತ್ತು.ಎಎಸ್‌ಡಿಎಫ್‌ನಿಂದ ರಕ್ಷಿಸಲ್ಪಟ್ಟ ಇಬ್ಬರನ್ನು ನಾಗಸಾಕಿಯಿಂದ ವಿಮಾನದ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಬ್ಬರೂ ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!