ಶಿರೂರು ಗುಡ್ಡ ಕುಸಿತ: ನಾಳೆಯೂ ಮುಂದುವರಿಯಲಿದೆ ಶೋಧ ಕಾರ್ಯಾಚರಣೆ

ಹೊಸ ದಿಗಂತ ವರದಿ,ಅಂಕೋಲಾ:

ಶಿರೂರು ಗುಡ್ಡ ಕುಸಿತದ ದುರಂತಕ್ಕೆ ಸಂಬಂಧಿಸಿದಂತೆ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಾಚರಣೆ ಅಗಸ್ಟ್ 16 ರಿಂದ ನಿರಂತರವಾಗಿ ಮುಂದುವರಿಯಲಿದ್ದು ಕಣ್ಮರೆಯಾಗಿರುವ ಮೂವರು ಮತ್ತು ವಾಹನಗಳ ಪತ್ತೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.

ಶಿರೂರು ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ನಡೆಯತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಅವರು ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಈಗಾಗಲೇ ನದಿಯಲ್ಲಿ ಶೋಧ ಕಾರ್ಯಕ್ಕೆ ಸಾಕಷ್ಟು ಪ್ರಯತ್ನಗಳು ನಡೆದಿವೆ, ಎನ್.ಡಿ.ಆರ್. ಎಫ್, ಎಸ್. ಡಿ.ಆರ್. ಎಫ್, ಮುಳುಗು ತಜ್ಞ ಈಶ್ವರ ಮಲ್ಪೆ ಸೇರಿದಂತೆ ಸಾಕಷ್ಟು ತಂಡಗಳು ಸತತ ಪ್ರಯತ್ನಗಳನ್ನು ನಡೆಸಿದರೂ ಲಾರಿಯ ಜಾಕ್ ಮತ್ತು ಇನ್ನೊಂದು ವಾಹನದ ಸಣ್ಣ ಭಾಗ ಸಿಕ್ಕಿದ್ದು ಬಿಟ್ಟರೆ ಬೇರೆ ಯಾವ ಸುಳಿವು ಲಭ್ಯವಾಗಿಲ್ಲ ಶಾಸಕ ಸತೀಶ ಸೈಲ್ ಸ್ಥಳದಲ್ಲೇ ಇದ್ದು ಶೋಧ ಕಾರ್ಯಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ, ದೇವರ ದಯೆಯಿಂದ ಮಳೆ ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಯಶಸ್ಸು ಸಿಗುವ ಸಂಪೂರ್ಣ ಭರವಸೆ ಇದೆ ಎಂದರು.

ಮುಳುಗು ತಜ್ಞ ಈಶ್ವರ ಮಲ್ಪೆ ಮಾತನಾಡಿ ನೀಡಲಾಗಿದ್ದ ನಾಲ್ಕು ಪಾಯಿಂಟ್ ಗಳಲ್ಲಿ ನಿರಂತರವಾಗಿ ಶೋಧ ನಡೆಸಲಾಗಿದೆ, ಲಾರಿಯ ಜಾಕ್ ಸಿಕ್ಕ ಸ್ಥಳದಲ್ಲಿ ಹೆಚ್ಚಿನ ಶೋಧ ನಡೆಸಿದ್ದೇವೆ ಆದರೆ ಲಾರಿಯಾಗಲಿ ಯಾವುದೇ ಮೃತ ದೇಹಗಳಾಗಲಿ ಕಂಡು ಬಂದಿಲ್ಲ ಎಂದರು.
ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಕೆ .ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠ ಎಂ.ನಾರಾಯಣ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!