ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಶಿರೂರು ಗುಡ್ಡ ಕುಸಿತದ ಶೋಧ ಕಾರ್ಯ ಮುಂದುವರಿದಿದ್ದು , ಗಂಗಾವಳಿ ನದಿಯಲ್ಲಿ ಹೋಂಡಾ ಆಕ್ಟಿವಾ ವಾಹನ ಪತ್ತೆಯಾಗಿದೆ.
ಶಿರೂರು ದುರಂತದಲ್ಲಿ ಇಡೀ ಕುಟುಂಬ ಬಲಿಯಾದ ಚಹಾ ಅಂಗಡಿ ಮಾಲೀಕ ಲಕ್ಷ್ಮಣ ನಾಯ್ಕ ಅವರ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ಗಂಗಾವಳಿ ನದಿಯಲ್ಲಿ ಗೋವಾದಿಂದ ಬಂದ ಬಂದರು ಇಲಾಖೆ ಮುಳುಗು ತಜ್ಞರು ಪತ್ತೆ ಹಚ್ಚಿದ್ದು ಕ್ರೇನ್ ಸಹಾಯದಿಂದ ವಾಹನವನ್ನು ಮೇಲಕ್ಕೆ ಎತ್ತಲಾಗಿದೆ.
ದ್ವಿಚಕ್ರ ವಾಹನದ ಜೊತೆಯಲ್ಲಿ ಗ್ಯಾಸ್ ಟ್ಯಾಂಕರ್ ಲಾರಿಯ ಇಂಜಿನ್ , ಕೇರಳ ಲಾರಿಯಲ್ಲಿದ್ದ ಕಟ್ಟಿಗೆಯ ತುಂಡುಗಳು, ಪಾತ್ರೆಗಳನ್ನು ನದಿ ನೀರಿನಿಂದ ಮೇಲೆ ಎತ್ತಿದ್ದಾರೆ.
ಲಕ್ಷ್ಮಣ ನಾಯ್ಕ ಅಂಗಡಿ ಇದ್ದ ಸ್ಥಳದಲ್ಲಿ ನದಿಯಲ್ಲಿ ಬಿದ್ದಿರುವ ಮಣ್ಣನ್ನು ಮೇಲೆತ್ತಿ ಕಣ್ಮರೆಯಾದ ಮೂವರ ಮೃತ ದೇಹಗಳು ಮತ್ತು ಕೇರಳದ ಭಾರತ್ ಬೆಂಜ್ ಲಾರಿಯ ಶೋಧ ಕಾರ್ಯ ನಡೆಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ , ಜಿಲ್ಲಾಧಿಕಾರಿ ಕೆ ,ಲಕ್ಷ್ಮಿಪ್ರಿಯ ಭೇಟಿ ನೀಡಿ ಕಾರ್ಯಾಚರಣೆಯ ವಿವರಗಳನ್ನು ಪಡೆದುಕೊಂಡರು.