ಹೊಸದಿಗಂತ ಡಿಜಿಟಲ್ ಡೆಸ್ಕ್
ಮದುರೈ: ಶ್ವಾನ ಪ್ರೀತಿ ನಮ್ಮಿಂದ ಏನೆಲ್ಲ ಮಾಡಿಸುತ್ತದೆ ಎಂಬುದಕ್ಕೆ ಇಲ್ಲೊಂದು ಸಾಕ್ಷಿ ಇದೆ ನೋಡಿ. ವೃದ್ಧರೊಬ್ಬರು ತಮ್ಮ ಪ್ರೀತಿಯ ಶ್ವಾನಕ್ಕೆ ಪ್ರತಿಮೆ ನಿರ್ಮಿಸಿ, ಪೂಜಿಸುತ್ತಿದ್ದಾರೆ.
ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಮನಮದುರೈ ಎಂಬಲ್ಲಿ 82 ವರ್ಷ ಪ್ರಾಯದ ಮುತ್ತು ಎಂಬ ವ್ಯಕ್ತಿ ತನ್ನ ನಾಯಿ ಟಾಮ್ ನೆನಪಿಗಾಗಿ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಈ ಬಗ್ಗೆ ಹೇಳಿಕೊಂಡಿರುವ ಅವರು, ‘ನನಗೆ ನನ್ನ ಮಗನಿಗಿಂತಲೂ ಹೆಚ್ಚಾಗಿ ನನ್ನ ನಾಯಿಯ ಮೇಲೆ ಪ್ರೀತಿ ಇದೆ. ಟಾಮ್ 2010ರಿಂದ ನನ್ನೊಂದಿಗೆ ಇದ್ದ. ಆದರೆ ಟಾಮ್ 2021ರಲ್ಲಿ ಸತ್ತು ಹೋದ. ನನ್ನ ಅಜ್ಜಿ ಮತ್ತು ತಂದೆ ಎಲ್ಲರೂ ಶ್ವಾನ ಪ್ರೇಮಿಗಳಾಗಿದ್ದಾರೆ’ ಎನ್ನುತ್ತಾರೆ.
ತಮ್ಮ ಹೊಲದಲ್ಲಿ ನಿರ್ಮಿಸಿರುವ ಈ ಅಮೃತಶಿಲೆಯ ಪ್ರತಿಮೆಗೆ ₹ 80ಸಾವಿರ ವೆಚ್ಚ ಮಾಡಲಾಗಿದೆ. ಮುಂದೆ ನಾಯಿಗೂ ಮಂದಿರ ಕಟ್ಟಲು ಮುಂದಾಗಿದ್ದೇವೆ. ಶುಭ ದಿನಗಳು ಮತ್ತು ಪ್ರತಿ ಶುಕ್ರವಾರದಂದು ನಾವು ಅನ್ನದಾನ ಹಾಗೂ ಪ್ರತಿಮೆಗೆ ಹಾರ ಹಾಕಿ ಪೂಜಿಸುತ್ತೇವೆ ಎಂದು ಮುತ್ತು ಅವರ ಮಗ ಮನೋಜ್ ಕುಮಾರ್ ಹೇಳುತ್ತಾರೆ.