ಪಹಲ್ಗಾಮ್ ಭಯೋತ್ಪಾದಕರ ಗುಂಡೇಟಿಗೆ ಬಲಿಯಾದವರ ಪಟ್ಟಿಯಲ್ಲಿ ಶಿವಮೊಗ್ಗದ ನಿವಾಸಿ

ಹೊಸದಿಗಂತ ಡಿಜಿಟಲ್, ಶಿವಮೊಗ್ಗ:

ಜಮ್ಮು ಸಮೀಪದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರ ಪೈಕಿ ಶಿವಮೊಗ್ಗದ ವಿಜಯನಗರ ನಿವಾಸಿ ಮಂಜುನಾಥ ರಾವ್ ಸೇರಿದ್ದಾರೆ.

ಇವರು ತಮ್ಮ ಪತ್ನಿ ಮತ್ತು ಪುತ್ರನೊಂದಿಗೆ ಏ.19ರಂದು ಜಮ್ಮು ಪ್ರವಾಸಕ್ಕೆಂದು ತೆರಳಿದ್ದರು. ಏ.24ರಂದು ಅವರು ವಾಪಾಸ್ ಬರಬೇಕಿತ್ತು. ಇದರ ನಡುವೆ ಅವಘಡ ಸಂಭವಿಸಿಹೋಗಿದೆ. ಭಯೋತ್ಪಾದಕರ ಗುಂಡಿಗೆ ಮಂಜುನಾಥ್ ರಾವ್ ಬಲಿಯಾಗಿರುವುದನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ದೃಢಪಡಿಸಿದ್ದಾರೆ. ಮೃತ ದೇಹ ತರಲು ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆ ಮಾಡಲಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!