ಹೊಸದಿಗಂತ ಡಿಜಿಟಲ್ ಡೆಸ್ಕ್:
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟ ರಾಜ್.ಬಿ.ಶೆಟ್ಟಿಗೆ ಕರೆ ಮಾಡಿ, ಕಾಲೆಳೆದಿದ್ದಾರೆ.
ಇನ್ನೇನು ಗರುಡ ಗಮನ ವೃಷಭ ವಾಹನ ಝೀ -5ನಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಭಜರಂಗಿ-2 ಕೂಡ ಝೀ -5 ನಲ್ಲಿ ರಿಲೀಸ್ ಆಗಿದ್ದು, ಶಿವಣ್ಣ ರಾಜ್ ಶೆಟ್ಟಿಗೆ ಪ್ರಾಂಕ್ ಕಾಲ್ ಮಾಡಿದ್ದಾರೆ.
ಕರೆ ಮಾಡಿ, ‘ಮಂಗಳಾದೇವಿಗೆ ನೀನು ಡಾನ್ ಆ ?’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ರಾಜ್ ಶೆಟ್ಟಿ ‘ಯಾರು ನೀವು’ ಎಂದಿದ್ದಾರೆ. ‘ಅಲ್ಲೇ ಬಂದು ಹೇಳ್ತೀನಿ ಯಾರೂ ಅಂತ, ನಾನಾ ನೀನಾ ಡಾನ್ ನೋಡೋಣ’ ಎಂದು ಶಿವಣ್ಣ ಹೇಳಿದ್ದಾರೆ. ಅದಕ್ಕೆ ರಾಜ್ ಕೂಡ ಬನ್ನಿ ನೋಡೋಣ ಎಂದಿದ್ದಾರೆ.
‘ಯಾರು ನೀವು ಏನ್ ಮಾತಾಡ್ತಾ ಇದಿರಾ’ ಎಂದು ರಾಜ್ ಮತ್ತೆ ಪ್ರಶ್ನಿಸಿದ್ದು, ಶಿವಣ್ಣ’ ನಾನು ಭಜರಂಗಿ’ ಎಂದಿದ್ದಾರೆ. ಕ್ಷಣ ಯೋಚಿಸಿದ ನಂತರ ಶಿವಣ್ಣನ ವಾಯ್ಸ್ ಎಂದು ರಾಜ್ ಶೆಟ್ಟಿಗೆ ಗೊತ್ತಾಗಿದೆ.
‘ನೀವೇ ದೊಡ್ಡ ಡಾನ್ ಶಿವಣ್ಣ’ ಎಂದು ಹೇಳಿ ನಕ್ಕಿದ್ದಾರೆ ರಾಜ್!