ರಾಜ್ಯದೆಲ್ಲೆಡೆ ಶಿವರಾತ್ರಿ ಸಂಭ್ರಮ, ಶಿವನಾಮ ಸ್ಮರಣೆಯಲ್ಲಿ ಮಿಂದ ಭಕ್ತರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ರಾಜ್ಯಾದ್ಯಂತ ಸಂಭ್ರಮದ ಶಿವರಾತ್ರಿ ಆಚರಣೆ ಮಾಡುತ್ತಿದ್ದು, ಎಲ್ಲೆಡೆ ಸಂಭ್ರಮದ ವಾತಾವರಣ ಮನೆಮಾಡಿದೆ.

ಶಿವನ ದೇಗುಲಗಳಲ್ಲಿ ಬೆಳಗ್ಗೆಯಿಂದಲೇ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಭಕ್ತರು ದೇಗುಲಗಳಿಗೆ ಆಗಮಿಸಿಸಿ ದೇವರ ದರುಶನ ಪಡೆದಿದ್ದಾರೆ.

ಮಾಘ ಮಾಸದ ಕೃಷ್ಣ ಪಕ್ಷದಲ್ಲಿ ಚದುದರ್ಶಿ ತಿಥಿಯಂದು ಮಹಾಶಿವರಾತ್ರಿಯನ್ನು ಆಚರಣೆ ಮಾಡಲಾಗುತ್ತದೆ. ಜನರು ಕೈಯಲ್ಲಿ ಬಿಲ್ವಪತ್ರೆ, ಹೂವುಗಳನ್ನು ಹಿಡಿದು ದೇಗುಲಗಳಿಗೆ ತೆರಳಿದ್ದಾರೆ. ಇಂದು ರಾತ್ರಿಯಿಡೀ ಜಾಗರಣೆ, ಭಜನೆ ಹಾಗೂ ಶಿವನಮ ಸ್ಮರಣೆ ನಡೆಯಲಿದೆ.

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಇದೂ ಒಂದು, ಶಿವಧ್ಯಾನದಲ್ಲಿ ಭಕ್ತಿಯಿಂದ ಅನ್ನಾಹಾರ ಸೇವಿಸದೆ ಜನ ವ್ರತದಲ್ಲಿ ತೊಡಗುತ್ತಾರೆ. ನಾಳೆ ಹೋಳಿಗೆಯೊಂದಿಗೆ ಹಬ್ಬವನ್ನು ಸಂಭ್ರಮಿಸುತ್ತಾರೆ.

ಪರಮೇಶ್ವರನಿಂದಲೇ ಜಗತ್ತು ನಡೆಯುತ್ತದೆ ಎಂದು ನಂಬುವ ಭಕ್ತರು ಇಂದು ದೇವನನ್ನು ಪೂಜಿಸಿದರೆ ಶಿವನ ಆಶೀರ್ವಾದ ನಮ್ಮ ಮೇಲಿರುತ್ತದೆ ಎಂದು ಜನ ನಂಬುತ್ತಾರೆ.

ಇಂದು ನೀರೂ ಸೇವಿಸದೆ ಕೆಲವರು ಕಠಿಣ ಉಪವಾಸ ಮಾಡುತ್ತಾರೆ, ಹಲವರು ಬರೀ ಹಣ್ಣು ಹಂಪಲುಗಳ ಸೇವನೆ ಮಾತ್ರ ಮಾಡುತ್ತಾರೆ. ಅನ್ನ, ಗೋಧಿ, ಈರುಳ್ಳಿ, ಬೆಳ್ಳುಳ್ಳಿಯನ್ನು ಇಂದು ಬಳಕೆ ಮಾಡುವುದಿಲ್ಲ.

ಪರಶಿವನು ನೋಡಲು ಅತೀ ಚೆಲುವನಾಗಿರುತ್ತಾನೆ. ಪಾರ್ವತಿ ದೇವಿ ಶಿವನನ್ನು ವರಿಸಬೇಕು ಎಂದುಕೊಳ್ಳುತ್ತಾಳೆ. ಆದರೆ ಶಿವ ಸಂಚಾರಿಯಾಗಿರುತ್ತಾನೆ. ಆತನನ್ನು ವರಿಸುವುದಕ್ಕಾಗಿ ಪಾರ್ವತಿ ವ್ರತ ಮಾಡುತ್ತಾಳೆ. ಪಾರ್ವತಿ ಹಠಕ್ಕೆ ಮಣಿದ ಶಿವನು ಪಾರ್ವತಿಯನ್ನು ಮದುವೆಯಾಗುತ್ತಾನೆ. ಇದೇ ದಿನವನ್ನು ಮಹಾಶಿವರಾತ್ರಿ ಎಂದು ಆಚರಿಸಲಾಗುತ್ತದೆ ಎನ್ನುವ ಪ್ರತೀತಿ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!