ವಿಚ್ಛೇದನದ ವದಂತಿ ನಡುವೆ ಸಾನಿಯಾ ಮಿರ್ಜಾ ಬರ್ತ್ ಡೇಗೆ ವಿಸ್ ಮಾಡಿದ ಶೋಯೆಬ್ ಮಲಿಕ್ !

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ನಡುವಿನ ವಿಚ್ಛೇದನದ ವದಂತಿ ಹರಿದಾಡುತ್ತಿದ್ದು, ಇದರ ನಡುವೆ ಪತಿ ಮಲಿಕ್ ಸಾನಿಯಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಮಲಿಕ್, ನಿಮಗೆ ಜನ್ಮದಿನದ ಶುಭಾಶಯಗಳು @ಮಿರ್ಜಾಸಾನಿಯಾ. ನೀವು ತುಂಬಾ ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ಬಯಸುತ್ತೀರಿ !ಪೂರ್ಣವಾಗಿ ದಿನವನ್ನು ಆನಂದಿಸಿ. ಎಂದು ಪೋಸ್ಟ್ ಮಾಡಿದ್ದಾರೆ. ಸಾನಿಯಾ ಮಿರ್ಜಾ ಈಗ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಇತ್ತ ಕಳೆದ ಹಲವುದಿನಗಳಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಸಾನಿಯಾ ಮಿರ್ಜಾ ಹಾಕಿದ್ದ ಪೋಸ್ಟ್‌ನಿಂದ “ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ? ಅಲ್ಲಾನನ್ನು ಹುಡುಕಲು,” ಎಂದು ಬರೆದಿದ್ದರು. ಇದು ವಿಚ್ಛೇದನದ ಊಹಾಪೋಹಗಳು ಹುಟ್ಟಿಸಿತ್ತು.

ಇದಾದ ಬಳಿಕ ಕಳೆದ ವಾರ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಅವರು ಒಟ್ಟಿಗೆ ಹೋಸ್ಟ್ ಮಾಡುವ ಹೊಸ ಟಾಕ್ ಶೋ “ದಿ ಮಿರ್ಜಾ ಮಲಿಕ್ ಶೋ” ಅನ್ನು ಘೋಷಿಸಿದರು.
ಹೀಗಾಗಿ ಇಬ್ಬರ ದಾಂಪತ್ಯ ಜೀವನದ ಕುರಿತು ನೆಟ್ಟಿಗರಲ್ಲಿ ಗೊಂದಲ ಉಂಟಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!