Thursday, December 1, 2022

Latest Posts

ಕೊಲೆಯ ಹಿಂದೆ ಲವ್ ಜಿಹಾದ್: ಅಫ್ತಾಬ್‍ಗೆ ಮರಣ ದಂಡನೆ ವಿಧಿಸಿ ಎಂದ ಶ್ರದ್ಧಾಳ ತಂದೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ರಾಷ್ಟ್ರ ರಾಜಧಾನಿಯಲ್ಲಿ ಗೆಳೆಯನಿಂದ ನಡೆದ ಬರ್ಬರವಾಗಿ ಹತ್ಯೆಯ ಹಲವು ರೋಚಕ ಸತ್ಯಗಳು ಹೊರಬರುತ್ತಿದ್ದು, ಶ್ರದ್ಧಾಳ ಕೊಲೆ ವಿವಿಧ ಆಯಾಮವನ್ನು ಪಡೆದುಕೊಳ್ಳುತ್ತಿದೆ.

ಈಗಾಗಲೇ ಆರೋಪಿ ಅಫ್ತಾಬ್‍ ಕೊಲೆಯ ಹಿಂದಿನ ರೋಚಕ ಸತ್ಯವನ್ನು ಬಿಚ್ಚಿಟ್ಟಿದ್ದು, ಈ ಬಗ್ಗೆ ಶ್ರದ್ಧಾಳ ತಂದೆ ಮಾತನಾಡಿ, ಘಟನೆ ಹಿಂದೆ ಲವ್ ಜಿಹಾದ್ ಇದೆ ಎಂದು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ದೆಹಲಿ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದುನಂಬಿದ್ದೇವೆ. ಶ್ರದ್ಧಾ ಆಕೆಯ ಚಿಕ್ಕಪ್ಪನ ಸಂಪರ್ಕದಲ್ಲಿ ಹೆಚ್ಚಿದ್ದಳು. ನನ್ನನೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಇದರಿಂದಾಗಿ ನಾನು ಅಫ್ತಾಬ್‍ನೊಂದಿಗೆ ಎಂದಿಗೂ ಸಂಪರ್ಕದಲ್ಲಿರಲಿಲ್ಲ . , ಆರೋಪಿ ಅಫ್ತಾಬ್‍ಗೆ ಮರಣ ದಂಡನೆ ವಿಧಿಸಬೇಕು ಜೊತೆಗೆ ಲವ್ ಜಿಹಾದ್ ಕೋನದಲ್ಲೂ ಶಂಕೆ ವ್ಯಕ್ತವಾಗುತ್ತಿದೆ ಎಂದರು.

ಈ ಮೊದಲು ಘಟನೆ ಕುರಿತು ಮುಂಬೈನ ವಸಾಯಿಯಲ್ಲಿ ದೂರು ದಾಖಲಿಸಿದ್ದೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಆರೋಪಿ ಅಫ್ತಾಬ್ ಹಾಗೂ ಶ್ರದ್ಧಾ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು. ಅದಾದ ಬಳಿಕ ಮನೆಯವರ ವಿರೋಧದ ನಡುವೆಯೂ ಶ್ರದ್ಧಾ ಅಫ್ತಾಬ್‍ನೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದಳು. ಈ ವೇಳೆ ಮದುವೆ ವಿಷಯಕ್ಕೆ ಇಬ್ಬರ ಮಧ್ಯೆ ಜಗಳವಾಗಿದ್ದು, ಶ್ರದ್ಧಾಳನ್ನು ಅಫ್ತಾಬ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅದಾದ ಬಳಿಕ ಆಕೆಯನ್ನು 35 ತುಂಡುಗಳನ್ನು ಮಾಡಿ ಕ್ರೂರತೆ ಮೆರೆದಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!