ಅಮಿರ್ ಖಾನ್ ಗೆ ಮತ್ತೆ ಶಾಕ್: ಲಾಲ್ ಸಿಂಗ್ ಚಡ್ಡಾ ಬಹಿಷ್ಕರಿಸಲು ಇಂಗ್ಲೆಂಡ್ ಕ್ರಿಕೆಟಿಗ ಕರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ನಟ ಅಮಿರ್ ಖಾನ್ ಅಭಿಯನದ ಲಾಲ್ ಸಿಂಗ್ ಚಡ್ಡಾ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದು, ಈ ಸಿನಿಮಾ ಬಹಿಷ್ಕರಿಸಲು ಹಲವರು ಅಭಿಯಾನ ಈಗಾಗಲೇ ಶುರುವಾಗಿದೆ.
ಇದೀಗ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮಾಂಟಿ ಪನೇಸರ್, ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಹಿಷ್ಕರಿಸಲು ಕರೆ ನೀಡಿದ್ದಾರೆ.

ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಬಾಲಿವುಡ್ ಸಿನಿಮಾದಲ್ಲಿ ಸಿಖ್ ಸಮುದಾಯಕ್ಕೆ ಹಾಗೂ ಭಾರತೀಯ ಸೇನೆಗೆ ಅವಮಾನ ಮಾಡಲಾಗಿದೆ. ಇದು ಅಕ್ಷ್ಯಮ ಅಪರಾಧ ಎಂದು ಮಾಂಟಿ ಪನೇಸರ್ ಹೇಳಿದ್ದಾರೆ.
ಭಾರತೀಯ ಸೇನೆ ಹಾಗೂ ಸಿಖ್ ಸಮುದಾಯವನ್ನು ಅವಮಾನಿಸುವ ಚಿತ್ರವನ್ನು ಬಹಿಷ್ಕರಿಸಿ ಎಂದು ಟ್ವೀಟ್ ಮೂಲಕ ಮಾಂಟಿ ಪನೆಸರ್ ಮನವಿ ಮಾಡಿದ್ದಾರೆ.

‘ಕಡಿಮೆ ಜ್ಞಾನವಿರುವ ಅಥವಾ ಐಕ್ಯೂ ಹೊಂದಿರುವ ವ್ಯಕ್ತಿ ಭಾರತೀಯ ಸೇನೆಗೆ ಸೇರುವ ರೀತಿ ಚಿತ್ರಿಸಲಾಗಿದೆ. ವಿಯೆಟ್ನಾಂ ಯುದ್ಧದ ಅವಶ್ಯಕತೆಗಳನ್ನು ಪೂರೈಸಲು ಅಮೆರಿಕ ಅತೀ ಕಡಿಮೆ ಬುದ್ದಿಯುಳ್ಳ ಪುರುಷರನ್ನು ಸೇನೆಗೆ ನೇಮಿಸಿಕೊಳ್ಳುತ್ತಿತ್ತು. ಇದು ಭಾರತೀಯ ಸೇನೆಗೆ ಅನ್ವಯಿಸುವುದಿಲ್ಲ. ಆದರೆ ಚಿತ್ರದಲ್ಲಿ ಸಿಖ್ ಸಮುದಾಯದ ವ್ಯಕ್ತಿಯನ್ನು ಬುದ್ದಿ ಕಡಿಮೆ ಇರುವ ಅಥವಾ ಇಲ್ಲದೇ ಇರುವ ರೀತಿ ಚಿತ್ರಿಸಲಾಗಿದೆ. ಈ ವ್ಯಕ್ತಿ ಭಾರತೀಯ ಸೇನೆಗೆ ಸೇರಿಕೊಳ್ಳುವ ರೀತಿ ಚಿತ್ರಿಸಲಾಗಿದೆ. ಇದು ಭಾರತೀಯ ಸೇನೆ ಹಾಗೂ ಸಿಖ್ ಸಮುದಾಯವನ್ನು ಅವಮಾನಿಸುವ ರೀತಿ ಇದೆ’ ಎಂದು ಮಾಂಡಿ ಪನೇಸರ್ ಹೇಳಿದ್ದಾರೆ.

ಮಾಂಟಿ ಪನೇಸರ್ ಭಾರತೀಯ ಮೂಲದ ಇಂಗ್ಲೆಂಡ್ ಕ್ರಿಕೆಟಿಗ. 2006 ರಿಂದ 2013ರ ವರೆಗೆ ಇಂಗ್ಲೆಂಡ್ ಪರ ಆಡಿದ ಸಿಖ್. ಮಾಂಟಿ ಪನೇಸರ್ ಇಂಗ್ಲೆಂಡ್‌ನಲ್ಲೇ ಹುಟ್ಟಿ ಬೆಳೆದಿದ್ದಾರೆ. ಆದರೆ ಮಾಂಟಿ ಪನೇಸರ್ ಮೂಲ ಭಾರತದ ಪಂಜಾಬ್. ಇದೀಗ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮಾಂಟಿ ಪನೇಸರ್ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!