Monday, October 3, 2022

Latest Posts

ಮರೆಯದೆ ಈ ಬಾರಿಯೂ ಬಂತು ಪ್ರಧಾನಿ ಮೋದಿಗೆ ರಾಖಿ: 2024ರ ಗೆಲುವಿಗೆ ಹಾರೈಸಿದ ಪಾಕ್ ಸಹೋದರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶಾದ್ಯಂತ ಸಂಭ್ರಮದಿಂದ ರಕ್ಷಾ ಬಂಧನ ಆಚರಣೆ ನಡೆಯಿತು. ಈ ಕ್ಷಣ ಪಾಕಿಸ್ತಾನದ ಮಹಿಳೆ ಪ್ರತಿ ಬಾರಿಯಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿಗೆ ರಾಖಿ ಕಳುಹಿಸಿದ್ದಾರೆ. ಅಷ್ಟೇ ಅಲ್ಲ, 2024ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಭಾರತದ ಪ್ರಧಾನಿಯಾಗುವಂತೆ ಹರಸಿದ್ದಾರೆ.
ಪಾಕಿಸ್ತಾನದ ಖಮರ್ ಮೊಹ್ಸಿನ್ ಶೇಖ್ ಎಂಬ ಮಹಿಳೆ​​ ಕಳೆದ 27 ವರ್ಷಗಳಿಂದಲೂ ನರೇಂದ್ರ ಮೋದಿ ಅವರಿಗೆ ರಾಖಿ ಕಳುಹಿಸುತ್ತಿದ್ದಾರೆ. ಸಿಲ್ಕ್ ರಿಬ್ಬನ್ ಮತ್ತು ಕಸೂತಿ ವಿನ್ಯಾಸದಿಂದ ಕೂಡಿದ ವಿಶೇಷ ರಾಖಿ ಇದಾಗಿದೆ.
ಕೋವಿಡ್​ನಿಂದಾಗಿ ಕಳೆದ ಎರಡು ವರ್ಷಗಳಿಂದ ಮೋದಿ ಅವರಿಗೆ ರಾಖಿ ಕಟ್ಟಲು ಸಾಧ್ಯವಾಗಿರಲಿಲ್ಲ. ಆದರೆ, ಮರೆಯದೆ ರಾಖಿ ಕಳುಹಿಸಿಕೊಡುತ್ತಿದ್ದಾರೆ.
ಈ ಸಲ ಅವರು ನನ್ನನ್ನು ದೆಹಲಿಗೆ ಕರೆಯಿಸುತ್ತಾರೆ ಎಂಬ ಭರವಸೆ ನನ್ನಲ್ಲಿದೆ ಎಂದು ಖಮರ್​ ಮೊಹ್ಸಿನ್​ ಶೇಖ್ ತಿಳಿಸಿದ್ದಾರೆ. ಭಾರತೀಯ ಮೂಲದ ವ್ಯಕ್ತಿಯನ್ನು ಇವರು ವರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!