ನಟ ಪಂಕಜ್ ತ್ರಿಪಾಠಿಗೆ ಶಾಕ್: ಭೀಕರ ಅಪಘಾತದಲ್ಲಿ ಸಹೋದರಿ ಪತಿ ನಿಧನ, ಸರಿತಾಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ ನಟ ಪಂಕಜ್ ತ್ರಿಪಾಠಿ ಕುಟುಂಬಕ್ಕೆ ಆಘಾತ ಎದುರಾಗಿದೆ. ಪಂಕಜ್ ತ್ರಿಪಾಠಿ ಸಹದೋರಿ ಸರಿತಾ ತಿವಾರಿ ಹಾಗೂ ಆಕೆಯ ಪತಿ ರಾಜೇಶ್ ತಿವಾರಿ ಸಂಚರಿಸುತ್ತಿದ್ದ ಕಾರು ಭೀಕರವಾಗಿ ಅಪಘಾತಕ್ಕೀಡಾಗಿದೆ.

ಬಿಹಾರದ ಕಮಲಪುರದಿಂದ ಪಶ್ಚಿಮ ಬಂಗಾಳದ ಚಿತ್ತರಂಜನ್‌ಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈ ಅಪಘಾತದಲ್ಲಿ ಪಂಕಜ್ ತ್ರಿಪಾಠಿ ಸಹದೋರಿ ಸರಿತಾ ಪತಿ ರಾಜೇಶ್ ತಿವಾರಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇನ್ನು ಸರಿತಾ ತಿವಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಿಸ್ರಾ ಬಳಿಯ ಜಿಟಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಕಾರು ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡಿದೆ. ವೇಗವಾಗಿ ಸಾಗಿ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ನಿಸ್ರಾ ಮಾರುಕಟ್ಟೆ ಬಳಿ ಇರುವ ಚೌಕ್ ಬಳಿ ಕಾರು ಡಿಕ್ಕಿಯಾಗಿದೆ. ತಕ್ಷಣವೇ ಸ್ಥಳೀಯರು ಗಾಯಗೊಂಡ ಇಬ್ಬರನ್ನು ಧನಬಾದ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾಜೇಶ್ ತಿವಾರಿ ಸ್ಥಳದಲ್ಲೆ ಮೃತ ಪಟ್ಟಿರುವುದಾಗಿ ವೈದ್ಯರು ಹೇಳಿದ್ದರೆ, ಗಂಭೀರವಾಗಿ ಗಾಯಗೊಂಡಿರುವ ಸರಿತಾ ತಿವಾರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ತಂಡ ಸರಿತಾ ಆರೋಗ್ಯ ಕುರಿತು ನಿಗಾವಹಿಸಿದೆ.

ಘಟನೆಯಿಂದ ಆಘಾತಗೊಂಡಿರುವ ಪಂಕಜ್ ತ್ರಿಪಾಠಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಭಾರತೀಯ ರೈಲ್ವೇ ಉದ್ಯೋಗಿಯಾಗಿರುವ ರಾಜೇಶ್ ತಿವಾರಿ, ಚಿತ್ತರಂಜನ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ತವರಿಗೆ ತೆರಳಿದ್ದ ರಾಜೇಶ್ ತಿವಾರಿ ಹಾಗೂ ಸರಿತಾ ತಿವಾರಿ ಮರಳಿ ಚಿತ್ತರಂಜನ್‌ಗೆ ಬರುತ್ತಿರುವ ವೇಳೆ ಅಪಘಾತ ಸಂಭವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!