Tuesday, February 7, 2023

Latest Posts

ನಟಿ ರಶ್ಮಿಕಾ ಮಂದಣ್ಣ ಗೆ ಶಾಕ್: ಪ್ರತಿಷ್ಠಿತ ಆಭರಣ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ಔಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಇದೀಗ ವಿವಾದದಲ್ಲಿ ಸಿಲುಕಿದ್ದಾರೆ. ಕರ್ನಾಟಕದಲ್ಲಿ ಕೊಡಗಿನ ರಶ್ಮಿಕಾ ಮೇಲೆ ಈಗಾಗಲೇ ಬ್ಯಾನ್ ಆಕ್ರೋಶದ ಬೆನ್ನಲ್ಲೇ ಪ್ರತಿಷ್ಠಿತ ಕಂಪನಿ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ಔಟ್ ಮಾಡಿದ್ದಾರೆ.‌

ಪ್ರತಿಷ್ಠಿತ ಆಭರಣ ಸಂಸ್ಥೆಯೊಂದು ಬ್ರ್ಯಾಂಡ್ ಅಂಬಾಸಿಡರ್ ಆಗಿ ರಶ್ಮಿಕಾ ಮಂದಣ್ಣ ಅವರನ್ನ ನೇಮಿಸಿಕೊಂಡಿತ್ತು. ಇದೀಗ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ವಜಾಗೊಳಿಸಿದ್ದಾರೆ. ನಟಿಯ ವಿವಾದಗಳಿಂದ ಕರ್ನಾಟಕ ಚಿತ್ರರಂಗ ಬ್ಯಾನ್ ಮಾಡಬೇಕು ಎಂಬ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಆಭರಣ ಸಂಸ್ಥೆಯು ರಶ್ಮಿಕಾರನ್ನ ಕೈಬಿಟ್ಟಿದೆ.

ರಶ್ಮಿಕಾ ಅವರ ಬದಲು ನಟಿ ತ್ರಿಷಾ ಅವರನ್ನ ಕರೆತರಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಕನ್ನಡದ ಸಿನಿಮಾ ಮೂಲಕ ಬದುಕು ಆರಂಭಿಸಿ, ಇಂದು ಮಿಂಚ್ತಿರುವ ಲಕ್ಕಿ ನಟಿ ರಶ್ಮಿಕಾಗೆ ಅದ್ಯಾಕೋ ಲಕ್ಕು ಕೈ ಕೊಟ್ಟಂತಿದೆ. ಇತ್ತೀಚೆಗೆ ತನ್ನ ವೃತ್ತಿ ಬದುಕಿನಲ್ಲಿ ಮೊದಲ ಹಿಟ್ ಸಿನಿಮಾ ನೀಡಿದ ನಿರ್ದೇಶಕ ರಿಷಬ್ ಶೆಟ್ಟಿ ತಂಡದವನ್ನು ಕಡೆಗಣಿಸಿದ್ದಾರೆ ಎಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!