Tuesday, February 7, 2023

Latest Posts

ಮದುವೆ ಖುಷಿಯಲ್ಲಿದ್ದ ದಂಪತಿಗೆ ಶಾಕ್​: ನಟಿ ಅದಿತಿ ಪ್ರಭುದೇವ ಪತಿಯ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್! 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸ್ಯಾಂಡಲ್​ವುಡ್​ನ ನಟಿ ಅದಿತಿ ಪ್ರಭುದೇವ ಅವರು ಯಶಸ್ (ಯಶಸ್ವಿ) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಂಭ್ರಮದಲ್ಲಿರುವಾಗಲೇ ಇದೀಗ ದೊಡ್ಡ ತಲೆನೋವು ಶುರುವಾಗಿದ್ದು, ನಟಿ ಅದಿತಿ ಪ್ರಭುದೇವ ಅವರ ಪತಿ ಯಶಸ್ ಅವರ ಸೋಶಿಯಲ್ ಮೀಡಿಯಾ ಖಾತೆಯನ್ನು ಯಾರೋ ಕಿಡಿಗೇಡಿಗಳು ಹ್ಯಾಕ್​ ಮಾಡಿದ್ದಾರೆ ಎನ್ನಲಾಗುತ್ತಿದೆ.


ನವೆಂಬರ್ 28 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್​​ನ ಗಾಯತ್ರಿ ವಿಹಾರ ಗ್ರ್ಯಾಂಡ್​ನಲ್ಲಿ ಈ ಜೋಡಿ ಅದ್ದೂರಿಯಾಗಿ ಮದುವೆ ನಡೆಯಿತು.ಅದಿತಿ ಪ್ರಭುದೇವ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭಾಶಯ ತಿಳಿಸಿದ್ದರು.

ಇದೀಗ ಮದುವೆ ಖುಷಿಯಲ್ಲಿದ್ದ ದಂಪತಿಗೆ ಶಾಕ್​ ಎದುರಾಗಿದೆ. ಯಶಸ್​ ಅವರ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್​ ಆಗಿದೆ. ಈ ಕುರಿತಾಗಿ ಯಶಸ್​ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ನನ್ನ ಇನ್ಸ್ಟಾಗ್ರಾಮ್ ಖಾತೆಯೂ ಹ್ಯಾಕ್​ ಆಗಿದೆ. ನನ್ನ ಖಾತೆಯಿಂದ ಯಾವುದೇ ಮಸೇಜ್​ ಬಂದರೆ ರಿಪ್ಲೈ ಮಾಡಬೇಡಿ. ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ಯಶಸ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!